Belagavi NewsBelgaum NewsKannada NewsKarnataka NewsPolitics

ಬೀಗರ ರಾಜಕೀಯ ಭವಿಷ್ಯಕ್ಕೆ ಶೆಟ್ಟರ್ ಬೀಗ! ಶೆಟ್ಟರು ಬಂದರು ದಾರಿ ಬಿಡಿ!!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿದ್ದರಿಂದ ತಮ್ಮ ರಾಜಕೀಯ ಭವಿಷ್ಯಕ್ಕೆ ನೆರವಾಗಲಿದೆ ಎನ್ನುವ ಸಂಸದೆ ಮಂಗಲಾ ಅಂಗಡಿ ನಿರೀಕ್ಷೆ ಹುಸಿಯಾಗಿದೆ. ಮಂಗಲಾ ಅಂಗಡಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿ ತರಬೇಕಿದ್ದ ಜಗದೀಶ್ ಶೆಟ್ಟರ್ ತಾವೇ ಟಿಕೆಟ್ ಗಿಟ್ಟಸಿ, ಅಂಗಡಿ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಮೊಳೆ ಹೊಡೆದುಬಿಟ್ಟರು!

ಬೀಗರೇ ತಮ್ಮ ರಾಜಕೀಯ ಭವಿಷ್ಯಕ್ಕೆ ಬೀಗ ಹಾಕಲಿದ್ದಾರೆ ಎಂದು ಮಂಗಲಾ ಅಂಗಡಿ ಹಾಗೂ ಅವರ ಮಕ್ಕಳು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ. ಶೆಟ್ಟರ್ ಬಿಜೆಪಿಗೆ ಮರಳಿದ್ದರಿಂದ ನಮಗೆ ಇನ್ನಷ್ಟು ಅನುಕೂಲವಾಗಲಿದೆ ಎನ್ನುವ ಮಂಗಲಾ ಅಂಗಡಿಯ ಸಂಭ್ರಮ ಬಹಳ ದಿನ ಉಳಿಯಲಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಬರದಲ್ಲಿ ಬೀಗರೆನ್ನುವುದನ್ನೂ ನೋಡದೆ ಟಿಕೆಟ್ ಕಸಿದುಕೊಂಡಿದ್ದಾರೆ.

Home add -Advt

ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ಬೆಳಗಾವಿಯ ಯಾವುದೇ ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟ ಇರಲಿಲ್ಲ. ಯಾವುದೇ ಸ್ಥಳೀಯ ನಾಯಕರಿಗೆ ಕೊಡಿ, ಒಟ್ಟಾಗಿ ಕೆಲಸ ಮಾಡುತ್ತೇವೆ ಎನ್ನುವ ಸಂದೇಶ ರವಾನಿಸಿದ್ದರು. ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಮಹಾಂತೇಶ ವಕ್ಕುಂದ, ಉಜ್ವಲಾ ಬಡವನಾಚೆ ಸೇರಿದಂತೆ ಹಲವುರ ಆಕಾಂಕ್ಷಿಗಳಾಗಿದ್ದರು. ಮಂಗಲಾ ಅಂಗಡಿಗೇ ಕೊಟ್ಟರೂ ಸಹಮತವಿದೆ ಎಂದು ತಿಳಿಸಿದ್ದರು.

ಆದರೆ ಸ್ಥಳೀಯರ ವಿರೋಧ ನಿರ್ಲಕ್ಷಿಸಿ ಹುಬ್ಬಳ್ಳಿಯ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಲಾಗಿದೆ. ಬೆಳಗಾವಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣದಿಂದ ಬೆಂಬಲಿಸುವುದಿಲ್ಲ ಎಂದು ಸಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Related Articles

Back to top button