Belagavi NewsBelgaum NewsKannada NewsKarnataka News

*ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ: ಬೈಕ್ ಸವಾರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಹಿಂದಿನಿಂದ ಬಂದ ಲಾರಿ ಬೈಕ್ ಸವಾರನಿಗೆ ಡಿಕ್ಕೆ ಹೊಡೆದ ಪರಿಣಾಮ, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.‌

ಈ ಘಟನೆ ಬೆಳಗಾವಿ ನಗರದ ಗೋವಾ ವೇಸ್ ಸಿಗ್ನಲ್ ಬಳಿ ಗುರುವಾರ ಸಂಜೆ ಸಂಭವಿಸಿದ್ದು, ಈ ಅಪಘಾತಕ್ಕೆ ಖಾನಾಪುರ ತಾಲೂಕು ಕಾಪೋಲಿ ಗ್ರಾಮದ ಸುನಿಲ್ ದಿಲೀಪ್ ದೇಸಾಯಿ (42)ಎಂಬುವವರು ದುರ್ಮರಣ ಹೊಂದಿದ್ದಾರೆ.

Home add -Advt

ಸುನಿಲ್ ದೇಸಾಯಿ ಅವರು ತಮ್ಮ ಬೈಕಿನಲ್ಲಿ ಆರ್‌ಪಿಡಿ ಕಾಲೇಜು ರಸ್ತೆಯಿಂದ ಗೋವಾವೇಸ್ ಕಡೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆಗಮಿಸಿ ದೂರು ದಾಖಲಿಸಿದ್ದಾರೆ.

Related Articles

Back to top button