Kannada NewsKarnataka NewsLatestNational
*ಗಂಗಾನದಿಯಲ್ಲಿ ದೋಣಿ ದುರಂತ: 6 ಮಂದಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ : ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದ್ದು, 6 ಮಂದಿ ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ.
ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಈ ಘಟನೆ ಸಂಭವಿಸಿದ್ದು, ಹನ್ನೊಂದು ಜನ ಈಜಿ ದಡ ಸೇರಿದರೆ, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಭವಿಸಿದಾಗ ಬೋಟ್ ಬರ್ಹನ ಉಮಾನಾಥ್ ಘಾಟ್ನಿಂದ ಡಿಯಾರಾಗೆ ಪ್ರಯಾಣಿಸುತ್ತಿದ್ದು, ಪ್ರಸ್ತುತ ಬೋಟ್ನಲ್ಲಿರುವ ಉಳಿದ ಆರು ಜನರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




