Kannada NewsKarnataka NewsLatestPolitics

*ಇದು ವಿಶ್ವಾಸಕ್ಕೆ ತಂದ ಧಕ್ಕೆ; ಶೆಟ್ಟರ್ ವಿರುದ್ಧ ಡಿಸಿಎಂ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದು, ಅವರು ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ರಾಜೀನಾಮೆ ಪತ್ರ ನನಗೆ ತಲುಪಿಲ್ಲ. ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ನಾನು ಕಾಂಗ್ರೆಸ್ ಗೆ ದ್ರೋಹ ಮಾಡಲ್ಲ ಅಂತ ಹೇಳಿದ್ದರು. ಈಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ ನಾವು ಕಾಂಗ್ರೆಸ್ ನಲ್ಲಿ ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೆವು ಎಂದು ಹೇಳಿದರು.

Home add -Advt

ವಿಧಾನಸಭಾ ಚುನಾವಣೆಯಲ್ಲಿ ಸೋತರೂ, ಅವರ ಮೇಲೆ ಗೌರವದಿಂದ ಎಂಎಲ್ ಸಿ ಸ್ಥಾನ ನೀಡಿದೆವು. ಆದರೆ ಈಗ ವಿಶ್ವಾಸಕ್ಕೆ ಧಕ್ಕೆ ತಂದು ಬಿಜೆಪಿಗೆ ಸೇರಿದ್ದಾರೆ. ಅದೇನು ಪ್ರತಿಕ್ರಿಯೆ ಕೊಡುತ್ತಾರೆ ಕೊಡಲಿ. ಬಳಿಕ ಮಾತನಾಡುತ್ತೇನೆ ಎಂದರು.

ಈಗ ದೇಶದ ಹಿತಕ್ಕಾಗಿ ಬಿಜೆಪಿ ಮರು ಸೇರ್ಪಡೆ ಎಂದುಶೆಟ್ಟರ್ ಹೇಳುತ್ತಿದ್ದಾರೆ. ಅಂದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ತಪ್ಪಿಸಿದ್ರಲ್ಲಾ ಆಗ ಅವರಿಗೆ ದೇಶದ ಹಿತ ಗೊತ್ತಾಗಲಿಲ್ವಾ? ಬಲವಂತದಿಂದ, ಒತ್ತಡದಿಂದ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ ಎಂದು ಕಿಡಿಕಾರಿದರು.

Related Articles

Back to top button