Kannada NewsKarnataka NewsLatest

*ಕಾರು ಅಪಘಾತ; ತಾಯಿ-ಮಗ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಭೀಕರ ಕಾರು ಅಪಘಾತದಲ್ಲಿ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಪಡಗಾನೂರು ಕ್ರಾಸ್ ಬಳಿ ನಡೆದಿದೆ.

ಇಂದಿರಾಬಾಯಿ ಮಲ್ಕಣ್ಣ ಆರಿಗೇರಿ (53) ಹಾಗೂ ಮಗ ಅಂಬರೀಶ (25) ಮೃತರು. ಕಾರಿನಲ್ಲಿದ್ದ ಅಜ್ಜಿ ಹಾಗೂ ಮೊಮ್ಮಗಳಿಗೆ ಗಾಯಗಳಾಗಿವೆ.

Home add -Advt

ಅಜ್ಜಿಯ ಕಣ್ಣಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ತೆರಳುತ್ತಿದ್ದಾಗ ಕಾರು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button