Latest

10 ತಿಂಗಳ ಮಗುವಿನ ಮೇಲೆ ಕೆಲಸದವನಿಂದಲೇ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಲಕ್ನೌ: ಪುಟಾಣಿ ಮಕ್ಕಳನ್ನು ಬಿಡದ ಕಾಮಾಂದರು ಹಸುಗೂಸುಗಳ ಮೇಲೂ ಅಟ್ಟಹಾಸ ಮೇರೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ 10 ತಿಂಗಳ ಮಗುವಿನ ಮೇಲೆ ಮನೆ ಕೆಲಸದವನೇ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರಪ್ರದೆಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸಾದತ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಹತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಮನೆ ಕೆಲಸದವನು ಎರಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಪಿಡಿಯಾಟ್ರಿಕ್ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿದೆ.

ಮನೆ ಕೆಲಸದ 18 ವರ್ಷದ ಸನ್ನಿ ಕುಮಾರ್ ಎಂಬ ಹುಡುಗ ಈ ಕೃತ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಗುವಿನ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ರೂಮಿನಲ್ಲಿ ಮಲಗಿದ್ದ ಮಗು ಜೋರಾಗಿ ಅಳಲು ಆರಂಭಿಸಿದೆ. ಹೋಗಿ ನೋಡುವಷ್ಟರಲ್ಲಿ ಕೆಲಸದ ಹುಡುಗ ಸನ್ನಿ ಕುಮಾರ್ ಅರೆಬರೆ ಬಟ್ಟೆಯಲ್ಲಿ ನಿಂತಿದ್ದ. ಅಷ್ಟರಲ್ಲಾಗಲೇ ಮಗು ಪ್ರಜ್ಞೆ ಕಳೆದುಕೊಂಡಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ತಪಾಸಣೆ ವೇಳೆ ಮಗುವಿನ ಮೇಲೆ ಲೈಮ್ಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ ಎಂದು ತಿಳಿದುಬಂದಿದೆ.

ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಸನ್ನಿ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಪೊಲೀಸ್ ಕಾನ್ಸ್ ಟೇಬಲ್

Home add -Advt

Related Articles

Back to top button