Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಹೇಯ ಕೃತ್ಯ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ*

ಕಾಮುಕ ಅರೆಸ್ಟ್


ಪ್ರಗತಿವಾಹಿನಿ ಸುದ್ದಿ: 10 ವರ್ಷದ ಬಾಲಕಿಗೆ ಚಾಕೋಲೆಟ್ ಆಮಿಷವೊಡ್ಡಿ ವೃದ್ಧನೊಬ್ಬ ಅತ್ಯಾಚಾರವೆಸಗಿರುವ ಹೇಯ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಬಾದಲ್ ನಲ್ಲಿ ನಡೆದಿದೆ.

ಆಸಿಫ್ ಭಾಗವಾನ ಎಂಬಾತ ಹತ್ತು ವರ್ಷದ ಬಾಲಕಿ ಮೆಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆಗಸ್ಟ್ 16ರಂದು ನಡೆದಿರುವ ಘಟನೆ ತದವಾಗಿ ಬೆಳಕಿಗೆ ಬಂದಿದೆ. ಚಾಕೋಲೆಟ್ ಗೆ ಹತ್ತುರೂಪಾಯಿ ನೀಡುವುದಾಗಿ ಅಮಿಷವೊಡ್ಡಿ ಕರೆದೊಯ್ದ ಆಸಿಫ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ.

ಬಾಲಕಿ ಪೋಷಕರ ಬಳಿ ವಿಷಯ ತಿಳಿಸಿದ್ದು, ಪೋಷಕರು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ನಿಪ್ಪಾಣಿ ಶಹರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button