Latest

ಹಿಟ್ ಎಂಡ್ ರನ್ ಕೇಸ್‌ : ಪರಿಹಾರ ಭಾರಿ ಹೆಚ್ಚಳ

ಪ್ರಗತಿ ವಾಹಿನಿ ಸುದ್ದಿ ಬೆಂಗಳೂರು:   ರಸ್ತೆ ಅಪಘಾತದ ಹಿಟ್ ಎಂಡ್ ರನ್ ಪ್ರಕರಣಗಳಲ್ಲಿ ಗಾಯಾಳುಗಳಿಗೆ ನೀಡುವ ಪರಿಹಾರವನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಿ ಆದೇಶಿಸಿದೆ.

ಪ್ರಸ್ತುತ ಹಿಟ್ ಎಂಡ್ ರನ್ ಪ್ರಕರಣಗಳಲ್ಲಿ ಗಾಯಾಳುಗಳಿಗೆ ೧೨.೫೦ ಸಾವಿರ ರೂ. ಹಾಗೂ ಅವರ ಅವಲಂಭಿತರಿಗೆ ೫೦ ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ಹಿಟ್ ಎಂಡ್ ರನ್ ಪ್ರಕರಣಗಳಲ್ಲಿಉ ಅಮಾಯಕರು ಗಾಯಗೊಂಡು ಮೃತಪಡುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಗಾಯಾಳುಗಳಿಗೆ ೫೦ ಸಾವಿರ ರೂ. ಹಾಗೂ ಅವಲಂಭಿತರಿಗೆ ೨ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದೆ. ಏ.೧ರಿಂದ ಇದು ಜಾರಿಯಾಗಲಿದೆ.

ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಠಾಣಾಧಿಕಾರಿಗಳಿಗೆ ಆದೇಶದ ಪ್ರತಿಯನ್ನು ಆರಕ್ಷಕ ಮಹಾ ನಿರೀಕ್ಷಕ ಪ್ರವೀಣ್ ಸೂದ್ ಅವರು ರವಾನಿಸಿದ್ದಾರೆ.

Home add -Advt

 ವಿವರಗಳು ಇಂತಿದೆ.

ಸಬ್ ಇನ್ಸ್ ಪೆಕ್ಟರ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Related Articles

Back to top button