Latest

ತಂಗಿಯ ಮೇಲೆ ಅಣ್ಣನಿಂದಲೇ ನೀಚ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಹಣ್ಣು ತರಲು ಹೋಗೋಣವೆಂದು ಸಹೋದರಿಯನ್ನು ಕರೆದುಕೊಂಡು ಹೋಗಿದ್ದ ಅಣ್ಣನೇ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತನ್ನ ದೊಡ್ಡಪ್ಪನ ಮಗನೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಸಂತ್ರಸ್ತ ಯುವತಿ ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸೀತಾಫಲ ಹಣ್ಣು ತರಲೆಂದು ಕರೆದೊಯ್ದ ಅಣ್ಣ ಬಳಿಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಕೃತ್ಯದ ಬಳಿಕ ಜೀವಬೆದರಿಕೆಯೊಡ್ಡಿದ್ದಾನೆ ಎಂದು ದೂರು ನೀಡಿದ್ದಾಳೆ.

Home add -Advt

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 5830 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿದೆ ಲಿಂಕ್

Related Articles

Back to top button