Kannada NewsKarnataka NewsLatestTravelWorld

*CNG ದರ ಏರಿಕೆ: ಆಟೋ ಕ್ಯಾಬ್ ಪ್ರಯಾಣಿಕರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ*

ಪ್ರಗತಿವಾಹಿನಿ ಸುದ್ದಿ : ಇರಾನ್ ವಿರುದ್ಧ ಇಸ್ರೇಲ್ ಯುದ್ಧದ ಪರಿಣಾಮ ಆಟೋ CNG ಬೆಲೆ 10 ರಿಂದ 20 ರೂಪಾಯಿವರೆಗೆ ಏರಿಕೆ ಆಗಿದ್ದು ಇದರಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. 

ಮೀಟರ್ ದರ ಏರಿಕೆ ಮಾಡಲು ಇದೀಗ ಚಾಲಕರು ಆಗ್ರಹಿಸಿದ್ದಾರೆ. ಸಾರ್ವಜನಿಕರಿಗೆ ಆಟೋ ಮೀಟರ್ ರೇಟ್ ಏರಿಕೆ ಬಿಸಿಯೂ ತಟ್ಟುವ ಸಾಧ್ಯತೆ ಇದೆ. ಬೆಂಗಳೂರಿನ ಆಟೋ, ಕ್ಯಾಬ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ.

Home add -Advt

ಆಟೋ, ಕ್ಯಾಬ್‌ಗೆ ಬಳಸುವ CNG ಗ್ಯಾಸ್ ದರ ಏರಿಕೆಯಾಗಿದೆ. ಈ ಹಿಂದೆ ಆಟೋ ಗೆ ಬಳಸುವ ದರ ಲೀಟರ್‌ಗೆ 58 ರೂ. ಇತ್ತು. ನಂತರ 59 ರೂ. ಆಯಿತು ಇದೀಗ ಕೆಲ ಬಂಕ್‌ಗಳಲ್ಲಿ 69.74 ರೂ. ಇದ್ದರೆ, ಕೆಲವೆಡೆ ಮಾಲೀಕರು 15 ರಿಂದ 20 ರೂ. ವರೆಗೆ ದರ ಏರಿಕೆ ಮಾಡಿಕೊಂಡಿದ್ದಾರೆ.

ಮುಂದಿನ ವಾರದಿಂದ ಆಟೋ, ಕ್ಯಾಬ್ CNG ಗ್ಯಾಸ್ ದರ ಮತ್ತಷ್ಟು ಏರಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದರಿಂದ ಆಟೋ, ಕ್ಯಾಬ್ ಬುಕ್ ಮಾಡುತ್ತಿದ್ದಂತೆಯೇ ಚಾಲಕರು ಕಿಮೀಗೆ 10 ರಿಂದ 20 ರೂಪಾಯಿ ಹೆಚ್ಚುವರಿ ಹಣ ಕೇಳುತ್ತಿದ್ದಾರೆ. ಹೀಗಾಗಿ ಅಂತಿಮವಾಗಿ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

https://pragativahini.com/iran-israel-wa

Related Articles

Back to top button