Latest

ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ತಿರುಚಿತ್ರಾಂಬಲಂ’

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಧನುಷ್ ಅಭಿನಯದ ತಮಿಳು ಚಿತ್ರ ‘ತಿರುಚಿತ್ರಾಂಬಲಂ’ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಧನುಷ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ನಿತ್ಯಾ ಮೆನೆನ್, ರಾಶಿ ಖನ್ನಾ, ಪ್ರಕಾಶ್ ರಾಜ್, ಭಾರತಿರಾಜ ಮತ್ತು ಪ್ರಿಯಾ ಭವಾನಿ ಶಂಕರ್ ನಟಿಸಿರುವ ಈ ಚಿತ್ರದಲ್ಲಿ ಧನುಷ್ ಫುಡ್ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಕೊನೆಯದಾಗಿ ಹಾಲಿವುಡ್ ಚಿತ್ರ ‘ದಿ ಗ್ರೇ ಮ್ಯಾನ್’ ನಲ್ಲಿ ಕಾಣಿಸಿಕೊಂಡಿದ್ದರು.

Home add -Advt

ನಿರ್ದೇಶಕ ಮಿತ್ರನ್ ಜವಾಹರ್ ಅವರಿಗೆ ಧನುಷ್ ಜೊತೆಗಿನ ನಾಲ್ಕನೇ ಪ್ರಾಜೆಕ್ಟ್ ಇದಾಗಿದೆ. ಇವರಿಬ್ಬರೂ ಈ ಹಿಂದೆ ‘ಕುಟ್ಟಿ’, ‘ಯಾರಡಿ ನೀ ಮೋಹಿನಿ’ ಮತ್ತು ‘ಉತ್ತಮ ಪುತ್ರನ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಚಿತ್ರದ ಕುರಿತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಚಿತ್ರ ವಿಶ್ವಾದ್ಯಂತ 100 ಕೋಟಿ ಗಳಿಸಿದೆ ಎಂದು ಘೋಷಿಸಿದರು. “#ತಿರುಚಿತ್ರಾಂಬಲಂ 100 Cr WW ಗ್ರಾಸ್ ಕ್ಲಬ್‌ಗೆ ಪ್ರವೇಶಿಸಿದೆ. @dhanushkraja ಮತ್ತು ತಂಡಕ್ಕೆ ಅಭಿನಂದನೆಗಳು…” ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.

8ನೇ ವರ್ಷಕ್ಕೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ ಡಿಸೈನರ್ ರೋಹಿತ್ ವರ್ಮಾ

Related Articles

Back to top button