Latest

ರೈಲ್ವೆ ಹಳಿ ಮೇಲೆ ಕೂತು ಪಾರ್ಟಿ, ರೈಲು ಹರಿದು ವಿದ್ಯಾರ್ಥಿಗಳ ಸಾವು

ಕೊಯಮತ್ತೂರು: ಕೊಯಮತ್ತೂರಿನಲ್ಲಿ ರೈಲು ಡಿಕ್ಕಿ ಹೊಡೆದು ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರೈಲ್ವೆ ಹಳಿಗಳ ಮೇಲೆ ಕೂತಿದ್ದಾಗ ಈ ಘಟನೆ ನಡೆದಿದೆ..

ವಿದ್ಯಾರ್ಥಿಗಳು ರೈಲ್ವೆ ಹಳಿ ಮೇಲೆ ಕೂತಿದ್ದ ಸಮಯದಲ್ಲಿ, ವೇಗದ ಚೆನ್ನೈ-ಆಲಪ್ಪುಳ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹರಿದಿದೆ. ರೈಲಿನ ವೇಗಕ್ಕೆ ಸ್ಥಳದಲ್ಲೇ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಕೊಯಮತ್ತೂರು ಬಳಿಯ ಸುಲೂರ್ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳದಲ್ಲಿ ದೊರೆತ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕಪ್‌ಗಳ ಆಧಾರದ ಮೇಲೆ, ಅವರು ಮದ್ಯ ಸೇವಿಸಲು ಹಳಿಗಳ ಮೇಲೆ ಕೂತಿದ್ದರು ಎಂದು ವರದಿಯಾಗಿದೆ.

Home add -Advt

ಮೃತರನ್ನು ಸಿದ್ದೀಕ್ ರಾಜ (22), ರಾಜಶೇಖರ್ (20), ಗೌತಮ್ (23) ಮತ್ತು ಕರುಪ್ಪಸಾಮಿ (24) ಎಂದು ಗುರುತಿಸಲಾಗಿದೆ. ಅವರೊಂದಿಗೆ ಇದ್ದ ವಿಗ್ನೇಶ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. 

Related Articles

Back to top button