Latest

ಧ್ವನಿವರ್ಧಕ ವಿಚಾರ; ಪೊಲೀಸ್ ಕಮಿಷ್ನರ್, ಐಜಿಪಿ, ಎಸ್ ಪಿ ಗಳಿಗೆ ಸುತ್ತೋಲೆ ಹೊರಡಿಸಿದ ಪೊಲೀಸ್ ಮಹಾನಿರ್ದೇಶಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬ್ಯಾನ್ ಮಾಡಬೇಕು ಎಂಬ ಕೂಗು ರಾಜ್ಯಾದ್ಯಂತ ವಿವಾದ ರೂಪ ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಡಿಜಿ-ಐಜಿಪಿ ಪ್ರವೀಣ್ ಸೂದ್, ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಯಾವುದೇ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಯಥಾವತ್ತಾಗಿ ಪಲಿಸಬೇಕು. ಶಬ್ಧ ಮಾಲಿನ್ಯ ಮಾಡುತ್ತಿದ್ದರೆ ಕೇಸ್ ಹಾಕಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Home add -Advt

ಅಲ್ಲದೇ ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿ ಟ್ಯೂಟ್, ಕಾರ್ಯಕ್ರಮಗಳು ಸೇರಿದಂತೆ ಎಲ್ಲೆಡೆ ನಿಗಾವಹಿಸಿ. ನಿಯಂತ್ರಣ ಮಂಡಳಿ ಕಾಯ್ದೆ 2000 ಅಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಲಾರಿ ಡಿಕ್ಕಿ; ಕಾನ್ಸ್ ಟೇಬಲ್ ಸೇರಿ ಮೂವರ ದುರ್ಮರಣ

Related Articles

Back to top button