Latest

*ಸಿಎಂ ಕುರ್ಚಿಗಾಗಿ ಮುಂದುವರೆದ ಪೈಪೋಟಿ; ಡಿ.ಕೆ.ಶಿವಕುಮಾರ್ ಗೆ ನಮ್ಮ ಬೆಂಬಲ ಎಂದ ವಿವಿಧ ಮಠಾಧೀಶರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಸ ಸರ್ಕಾರ ರಚನೆ ಕಸರತ್ತು, ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಆಚರಿಸಿದರು.

ಈ ನಡುವೆ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಸದಾಶಿವನಗರ ನಿವಾಸದಲ್ಲಿ ಸಂಸದ ಡಿ ಕೆ ಸುರೇಶ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ತಮ್ಮ ಸಮುದಾಯಗಳ ಬೆಂಬಲ ಇದೆ ಎಂದು ತಿಳಿಸಿದರು.

Home add -Advt

ನಿನ್ನೆ ನಡೆದಿದ್ದ ಒಕ್ಕಲಿಗ ಸಮುದಾಯದ ಪದಾಧಿಕಾರಿಗಳ ಸಭೆಯಲ್ಲಿಯೂ ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಮೊದಲಾದವರು ಈ ಬಾರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು.

https://pragati.taskdun.com/d-k-shivakumarsiddharaiahcongressclp-meetingvidhanasabha-election/

Related Articles

Back to top button