Kannada NewsKarnataka NewsLatest

*ಮಾಜಿ ಸಚಿವ ಸಿ.ವೀರಣ್ಣ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ, ಮಾಜಿ ಉಪಸಭಾಪತಿ ಸಿ.ವೀರಣ್ಣ ವಿಧಿವಶರಾಗಿದ್ದಾರೆ. ತುನಕೂರು ಜಿಲ್ಲೆಯ ಕೊರಟಗೆರೆಯ ತಮ್ಮ ತೋಟದ ಮನೆಯಲ್ಲಿ ನಿಧನ ಹೊಂದಿದ್ದಾರೆ.

Home add -Advt

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೀರಣ್ಣ ತಮ್ಮ ತೀಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ಬಳಿಕ ರಾಜಕೀಯಕ್ಕೆ ಧುಮುಕಿದ್ದರು

ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದಾರೆ. ವೀರಣ್ಣ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರ ಮಾವ. 1983ರಲ್ಲಿ ಡೆಪ್ಯೂಟಿ ಸ್ಪೀಕರ್, 1984-89ವರೆಗೂ ಸಚಿವರಾಗಿದ್ದ ವೀರಣ್ಣ, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು..

ರಾಮಕೃಷ್ಣ ಹೆಗಡೆ,ಬೊಮ್ಮಯಿ ಕಾಲದಲ್ಲಿ ಸಾರಿಗೆ, ಸಣ್ಣ ಉಳಿತಾಯ,ಕೈಗಾರಿಕೆ ಹಾಗೂ ವಾಣಿಜ್ಯ, ಬಂಧಿಖಾನೆ ಸೇರಿ ಹನ್ನೊಂದು ಇಲಾಖೆಗಳನ್ನ ನಿರ್ವಹಿಸಿದ್ದ ವೀರಣ್ಣ ಪರಿಶಿಷ್ಟ ಪಂಗಡದ ಲಿಸ್ಟ್ ಲ್ಲಿ ವಾಲ್ಮೀಕಿ ಸಮುದಾಯ ಪದ ಸೇರಿಸಲು ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ತಿಂಗಳು ಆರೋಗ್ಯ ಸಮಸ್ಯೆಯಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ನಿನ್ನೆ ರಾತ್ರಿ ತೋಟದ ಮನೆಯಲ್ಲಿ ವೀರಣ್ಣ ವಿಧಿವಶರಾಗಿದ್ದಾರೆ.

Related Articles

Back to top button