Kannada NewsLatest

ಹಿರೇಬಾಗೇವಾಡಿ ಬಳಿ ಭೀಕರ ಅಪಘಾತ: ಯಲ್ಲಾಪುರದ ಮೂವರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ  ಸಮೀಪದ ವಿರಪನಕೊಪ್ಪ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ಧಾರವಾಡ ಕಡೆಯಿಂದ ಬೆಳಗಾವಿ ಕಡೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು  ಲಾರಿಗೆ ಹಿಂಬದಿ ಗುದ್ದಿದ್ದರಿಂದ ಕಾರಿನಲ್ಲಿನ 3 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತರು ಯಲ್ಲಾಪುರದರು. ಇವರೆಲ್ಲ ಬೆಳಗಾವಿಯ ಆಸ್ಪತ್ರೆಗೆಂದು ಬಂದಿದ್ದರು.
ವಾಸಿಂ ಖಾನ್ (40), ಸಯ್ಯದ್ ಇಸ್ಮಾಯಿಲ್ ದಾವೂದ್ (65), ಸುಶೀಲಾ ಫರ್ನಾಂಡೀಸ್ (60) ಮೃತರು.
ಆಸ್ಪತ್ರೆಗೆ ಬರುತ್ತಿದ್ದರು
ಜಾವೇದ್ (41) ಹಾಗೂ ಮುಕ್ತಿಯಾರ್ ಸೈಯದ್ (45) ತೀವ್ರ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮೃತ ಪಟ್ಟವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತರ ಸಂಬಂಧಿಕರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

Related Articles

Back to top button