Karnataka News

*ಮಹಾಶಿವರಾತ್ರಿಯಂದೇ ಮತ್ತೊಂದು ದುರಂತ: ಆದಿಯೋಗಿ ದರ್ಶನಕ್ಕೆ ಬಂದಿದ್ದ ಇಬ್ಬರು ಭಕ್ತರು ಭೀಕರ ಅಪಘಾತದಲ್ಲಿ ಸಾವು*

ಪ್ರಗತಿವಾಹಿನಿ ಸುದ್ದಿ: ಮಹಾಶಿವರಾತ್ರಿ ದಿನದಂದೇ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಆದಿಯೋಗಿ ದರ್ಶನಕ್ಕೆ ಬಂದಿದ್ದ ಇಬ್ಬರು ಭಕ್ತರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Home add -Advt

ಚಿಕ್ಕಬಳ್ಳಾಪುರದ ಆದಿಯೋಗಿ ದರ್ಶನಕ್ಕೆಂದು ಬೈಕ್ ನಲ್ಲಿ ಬಂದಿದ್ದ ಇಬ್ಬರು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬ್ರಿಡ್ಜ್ ಬಳಿ ಈ ಅಪಘಾತ ಸಂಭವಿಸಿದೆ.

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೇಪಾಳ ಮೂಲದ ಸುನೀಲ್ ಬಿಸ್ತೂರಿ, ಕುಜಲ್ ಭಂಡಾರಿ ಮೃತ ದುರ್ದೈವಿಗಳು.

Related Articles

Back to top button