
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ಇಂದೂ ಕೂಡ ಸಿಡಿ ಪ್ರಕರಣ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸಿಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಸಿಡಿಗಳನ್ನು ಹಿಡಿದು ಸದನಕ್ಕೆ ಆಗಮಿಸಿದ ಕಾಂಗ್ರೆಸ್ ಸದಸ್ಯರು, ಕಲಾಪ ಆರಂಭವಾಗುತ್ತಿದ್ದಂತೆಯೇ ಸಿಡಿ ಪ್ರದರ್ಶಿಸಿ, ಸಿಡಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ವಿಪಕ್ಷ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಬೇಕು. ಈ ರೀತಿ ಸಿಡಿ ಹಿಡಿದು ಪ್ರತಿಭಟಿಸುವುದು ಸತ್ ಸಂಪ್ರದಾಯವಲ್ಲ ಎಂದು ಸ್ಪೀಕರ್ ಹೇಳಿದರು. ಸ್ಪೀಕರ್ ಮನವಿಗೂ ಬಗ್ಗದ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದಾಗ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಹನಿ ತಿಂದವರ್ಯಾರು ಎಂದ ಡಿಕೆಶಿ, ಕಾಂಗ್ರೆಸ್ ಗೆ ಭಯವೇಕೆ ಎಂದ ಬೊಮ್ಮಾಯಿ
ಕರ್ನಾಟಕ ಪೊಲೀಸರ ಗೌರವ ಕೆಡಿಸಬೇಡಿ – ಸದನದಲ್ಲಿ ಕಾಂಗ್ರೆಸ್ ತರಾಟೆ