ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಂದಿಗುಂದ ಸಮೀಪದ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಘಟಪ್ರಭಾ ನದಿ ಎಡದಂಡೆ ಕಾಲುವೆಯಲ್ಲಿ ಜಾರಿ ಬಿದ್ದಿದ್ದ ಮಹಿಳೆ ಶವ ಪತ್ತೆಯಾಗಿದೆ.
ಸುಲ್ತಾನಪುರ ಗ್ರಾಮದ ಲಕ್ಷ್ಮೀ ಮಹಾದೇವ ಗೋಕಾಕ (23) ಮೃತಪಟ್ಟವರು. ಭಾನುವಾರ ಬೆಳಗ್ಗೆ ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಅವರು ಮರಳಿ ಬಂದಿರಲಿಲ್ಲ. ಮನೆಯವರು ಅವರನ್ನು ಹುಡುಕಾಡಿ ಎಲ್ಲೂ ಪತ್ತೆಯಾಗದಿದ್ದಾಗ ನದಿಯಲ್ಲಿ ಮುಳುಗಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.
ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಶವ ಹೊರ ತೆಗೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ