ಪ್ರಗತಿವಾಹಿನಿ ಸುದ್ದಿ, ಕಬ್ಬೂರ – ಪಟ್ಟಣದ ಹೊರವಲಯದ ಗಣೇಶ ನಗರದ ನಾವಗೇರ ತೋಟದಲ್ಲಿ ಈಜು ಕಲಿಯಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ೨ ಗಂಟೆಯ ಸಮಯದಲ್ಲಿ ನಡೆದಿದೆ.
ಮೃತಪಟ್ಟವರು ಮಹಾಂತೇಶ ಶ್ರೀಕಾಂತ ನಾವಿ(೨೫) ಮತ್ತು ಶ್ರೀಶೈಲ ಬಸವರಾಜ ನಾವಲಗೇರ(೧೦).
ತಮ್ಮ ಬಾವಿಯಲ್ಲಿ ಈಜು ಕಲಿಯಲು ಡಬ್ಬಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಈಜುವಾಗ ಡಬ್ಬಿ ಬಿಚ್ಚಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಪ್ರಮುಖ ಅಗ್ನಿಶಾಮಕ ದಳದ ಟಿ.ಬಿ.ಪರೀಟ ಹಾಗೂ ಸಿಬ್ಬಂದಿಗಳು ಬಾವಿಯಲ್ಲಿ ಶೋಧ ಕಾರ್ಯ ನಡೆಸಿ ಬಾಲಕನ ಮತ್ತು ಯುವಕನ ಮೃತ ದೇಹಗಳನ್ನು ರಾತ್ರಿ ೮ರ ಸುಮಾರಿಗೆ ಸ್ಥಳೀಯರ ಸಹಾಯದಿಂದ ಹೋರತೆಗೆಯಲಾಯಿತು.
ಘಟನಾ ಚಿಕ್ಕೋಡಿಯ ಪಿಎಸ್ಐ ಯಮನಪ್ಪ ಮಾಂಗ ಮತ್ತು ಅಶೋಕ ಕುಳ್ಳೂರ ಹಾಗೂ ಎಎಸೈ ಸಿ.ಆಯ.ಮಠಪತಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಸಿಲಿಸಿ ಪ್ರಖರಣವನ್ನು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಈ ವರ್ಷ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇಲ್ಲ; ಜಿಲ್ಲಾಧಿಕಾರಿಗಳಿಂದ 13 ಮಾರ್ಗದರ್ಶಿ ಸೂತ್ರ ಬಿಡುಗಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ