ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಹಿಂದೂ ಪರಿಷತ್ ಬೆಳಗಾವಿಯ ಸಮರಸತಾ ಭವನ ಕಟ್ಟಡ ನಿರ್ಮಾಣದ 3ನೇ ಮಹಡಿ ಕಾಂಕ್ರೀಟ್( ಸ್ಲ್ಯಾಬ್ ) ಪೂಜಾ ಸಮಾರಂಭ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಹಾಗೂ ಸಮಾಜದ ಪ್ರಮುಖರ ಸಹಯೋಗದೊಂದಿಗೆ ನಡೆಯಿತು.

ವಿಶ್ವ ಹಿಂದು ಪರಿಷತ್ತಿನ ಉತ್ತರ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಮಾಬ್ಲೇಶ್ವರಜೀ ಕಟ್ಟಡದ ನಿರ್ಮಾಣದ ಕುರಿತು ವಿವರಿಸಿದರು.
ಸ್ವಾಮೀಜಿಯವರು, ಆದಷ್ಟು ಬೇಗ ಸಮಾಜದಲ್ಲಿ ಸಾಮರಸ್ಯ ಮೂಡಲಿ ಮತಾಂತರ ನಿಲ್ಲಲಿ. ಹತ್ತಾರು ಹೂವಿನ ಪಕಳೆ ಸೇರಿ ಹೂವಿನ ನಿರ್ಮಾಣ ಆದಂತೆ ಹೆಚ್ಚೆಚ್ಚು ಜನರ ಸಹಕಾರದಿಂದ ,ನೂರಾರು ಪೂಜ್ಯ ಸಂತರ ಸಮಾಗಮದೊಂದಿಗೆ ಬೇಗ ಕಟ್ಟಡ ಪೂರ್ಣಗೊಂಡು ವಿಶ್ವ ಹಿಂದುಪರಿಷದ್ ಕಾರ್ಯ ವಿಸ್ತಾರ ಆಗುವ ಕೇಂದ್ರ ಸಮರಸತಾ ಭವನ ಆಗಲಿ ಎಂದು ಆಶೀರ್ವದಿಸಿದರು.

ರಾಜ್ಯ ಪ್ರಶಸ್ತಿಯ ವಿಜೇತ ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಅಧ್ಯಕ್ಷ ಡಾ ರಾಮನಗೌಡರ ಹಾಗೂ ಕಾಡಾ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ್ ತಲಾ ಒಂದು ಲಕ್ಷ ಚೆಕ್ ನೀಡಿದರು.
ಶಾಸಕ ಅನಿಲ ಬೆನಕೆ ಬಿಲ್ಡಂಗ್ ಪೂರ್ಣಗೊಳಿಸಲು ಬೇಕಾದ ಸಿಮೆಂಟ, ಶ್ರೀಮಂತ ಧನಘರ 25 ಸಾವಿರ ರೂ., ಬಿಲ್ಡರ್ ಮದನಕುಮಾರ 21 ಸಾವಿರ ರೂ., ಜ್ಯೋತಿಬಾ ರೇಮಾನಿ, ವಿಠಲ ಹಲಗೇಕರ ತಲಾ 2 ಟ್ರಕ್ ಇಟ್ಟಂಗಿ, ಪಾಂಡುರಂಗ ಧಾಮನೇಕರ, ಬಸವರಾಜ ಸಿದ್ರಾಮಿ 1ಟ್ರಕ್ ಉಸುಕು ಕೊಡುವುದರೊಂದಿಗೆ ಪ್ರೇರಣೆಯಾದರು.

ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ, ಬಿಲ್ಡರ್ ವಿಜಯ ಪಾಟೀಲ, ರಾಜೇಶ ಹೆಡಾ, ಪಂಚಾಕ್ಷರಿ ಹಿರೇಮಠ, ಬಂಟರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟರ್, ವಿಶ್ವ ಹಿಂದು ಪರಿಷತ್ತಿನ ಸಹಕೋಶಾಧ್ಯಕ್ಷ ಕೃಷ್ಣ ಭಟ್, ಬಿಜೆಪಿ ಮುಖಂಡ ಕಿರಣ ಜಾಧವ, ಕಾರ್ಯಕರ್ತರು , ಮಾತೆಯರು, ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಶ್ವ ಹಿಂದು ಪರಿಷದ್ ಶಾಂತಿ ಮಂತ್ರ ಜಯಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.