Kannada NewsKarnataka News

*ಯುವಕನ ಕಿರುಕಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿ*

ಪ್ರಗತಿವಾಹಿನಿ ಸುದ್ದಿ: ಸತತವಾಗಿ ಫೋನ್ ನಲ್ಲಿ‌ ಯುವಕ ಕಿರುಕುಳ‌ ನೀಡುತ್ತಿದ್ದಾನೆ ಎಂದು ಯುವಕನ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ‌‌.

Home add -Advt

ಕೊಪ್ಪಳ ಜಿಲ್ಲೆಯ ಉಚ್ಚಲಕುಂಟ ಗ್ರಾಮದಲ್ಲಿ ಘಟನೆ ನಡೆದಿದ್ದು,  ಪೂಜಾ ಯಡ್ಡೋಣಿ(16) ಆತ್ಮಹತ್ಯೆ ಮಾಡಿಕೊಂಡ‌ ಬಾಲಕಿ ಆಗಿದ್ದು, ಆರೋಪಿ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.‌

ಪುರಷೋತ್ತಮ ಎನ್ನುವ ಯುವಕ ಬಾಲಕಿ  ಮನೆಯ ಮೊಬೈಲ್ ಗೆ ಕರೆ ಮಾಡಿ, ಬೇರೊಂದು ನಂಬರ್ ಮೂಲಕ‌‌ ಕಾನ್ಫರೆನ್ಸ್ ಕಾಲ್ ಮಾಡುತ್ತಿದ್ದ ಪುರಷೋತ್ತಮ ಅನೇಕ‌ ಬಾರಿ ಫೋನ್ ‌ಮಾಡಿ ಬಾಲಕಿಗೆ ಕಿರುಕುಳ‌ ನೀಡುತ್ತಿದ್ದ ಹಾಗಾಗಿ ಎಪ್ರೀಲ್ 7 ರಂದು ಬಾಲಕಿ ಸೇವಿಸಿದ್ದಾಳೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಇಂದು ಸಾವನ್ನಪ್ಪಿದಾಳೆ.‌

ಈ ಹಿನ್ನಲೆಯಲ್ಲಿ ಆರೋಪಿ ಪುರಷೋತ್ತಮ ಬಂಧನಕ್ಕೆ‌ ಆಗ್ರಹಿಸಿರುವ ಉಚ್ಚಲಕುಂಟ ಗ್ರಾಮಸ್ಥರು,  ಬೇವೂರು ಪೊಲೀಸ್ ಠಾಣೆ ಎದುರು ಪೂಜಾ ಶವವಿಟ್ಟು ಪ್ರತಿಭಟಿಸಿ. ಆರೋಪಿ ಬಂಧನ ಮಾಡುವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Related Articles

Back to top button