ಕಾಡಂಚಿನ ಗ್ರಾಮಸ್ಥರ ನರಕಯಾತನೆ: ಚಟ್ಟಕಟ್ಟಿ ರೋಗಿಯ ಸಾಗಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ಕ್ಕೂ ಅಧಿಕ ವರ್ಷಗಳು ಕಳೆದಿವೆ. ಆದರೆ ಇನ್ನೂವರೆಗೆ ಹಲವಾರು ಗ್ರಾಮಗಳಿಗೆ ಸಮಪರ್ಕ ರಸ್ತೆ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಅಂತಹ ಜನರ ಪರಿಸ್ಥಿತಿ ಹೆಳತೀರದಾಗಿದೆ.
ಹೌದು… ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಎಡೆಬಿಡದೆ ಒಂದು ಕಡೆ ಮಳೆ ಜೋರಾಗಿ ಸುರಿಯುತ್ತಿದ್ದರೆ. ಮಳೆಯಲ್ಲೇ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಕಾಡಂಚಿನ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟಿದ್ದಾರೆ.
ಖಾನಾಪುರ ತಾಲೂಕಿನ ಕೊಂಗಳಾ ಗ್ರಾಮದ ವೆಂಕಟ್ ಗಾಂವಕರ್ ಎನ್ನುವ ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಚಟ್ಟದ ಮೇಲೆ 8ಕಿ.ಮೀ.ಹೊತ್ಯೊಯ್ದಿದ್ದಾರೆ.
ಒಂದು ಕಡೆ ಉಕ್ಕಿ ಹರಿಯುವ ಪಾಂಡ್ರಿ ನದಿ, ಬಂಡೂರಿ ನಾಲೆಯ ಕಟ್ಟಿಗೆ ಸೇತುವೆ ಮೇಲೆ ಚಟ್ಟ ಹೊತ್ತು ಸಾಗಾಟ ನಡೆಸಿದ್ದಾರೆ. ಖಾನಾಪುರ ಕಾಡಂಚಿನ ಗ್ರಾಮಸ್ಥರು ಮಳೆಗಾಲ ಸಂದರ್ಭದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಮೋಹಮ್ಮದ ರೋಷನ್ ಅವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.