Belagavi NewsBelgaum NewsKannada NewsKarnataka NewsUncategorized

ಮಹಿಳೆ ನಾಪತ್ತೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸಾಯಿನಾಥ ಕಾಲೋನಿ ೯ನೇ ಕ್ರಾಸ್ ಭಾಗ್ಯನಗರದ ಆದಿತಿ ಅನೀಲ ಪಾವಸೆ ಎಂಬ ಮಹಿಳೆಯು ಜೂ.೧೨ ರಂದು ಮನೆಯಲ್ಲಿ ಯಾರಿಗು ಹೇಳದೇ ಕೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ತಂದೆ ಅನೀಲ ಪಾವಸೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯ ವಿವರ: ವಯಸ್ಸು ೧೮ ವರ್ಷ, ೫ ಪೂಟ ೧ ಇಂಚು ಎತ್ತರ, ಕೋಲು ಮುಖ, ಉದ್ದ ಮೂಗು, ಗೋದಿಗೆಂಪು ಮೈಬಣ್ಣ, ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.
ಸದರಿ ಕಾಣೆಯಾದ ಮಹಿಳೆಯ ಮಾಹಿತಿ ದೊರೆತಲ್ಲಿ ತಿಲಕವಾಡಿ ಪಿಎಸ್‌ಐ, ದೂ.೯೪೮೦೮೦೪೧೧೨, ತಿಲಕವಾಡಿ ಪೊಲೀಸ್ ಇನ್ಸ್‌ಪೆಕ್ಟರ ದೂ.೯೪೮೦೮೦೪೦೫೨, ತಿಲಕವಾಡಿ ಪೊಲೀಸ್ ಠಾಣೆ ದೂರವಾಣಿ:೦೮೩೧-೨೪೦೫೨೩೬, ಬೆಳಗಾವಿ ಪೊಲೀಸ್ ಕಂಟ್ರೋಲ್ ರೂಂ ದೂ.೦೮೩೧-೨೪೦೫೨೩೧/೨೪೦೫೨೫೫, ಅಥವಾ ದೂ.೯೯೦೨೮೯೫೫೫೯, ೯೦೩೫೦೭೨೭೨೮ ಸಂಪರ್ಕಿಸಬಹುದು ಎಂದು ತಿಲಕವಾಡಿ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button