Sports

*ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನ ಎಂಟ್ರಿ*

ಪ್ರಗತಿವಾಹಿನಿ ಸುದ್ದಿ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬಿಹಾರದ 13 ವರ್ಷದ ಹುಡುಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾನೆ. ಬಿಹಾರದ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.

ಐಪಿಎಲ್ ನಲ್ಲಿ ನೊಂದಾಯಿಸಿಕೊಂಡವರ ಪಟ್ಟಿಯಲ್ಲಿ ಅತಿ ಕಿರಿಯ ಆಟಗಾರನಾಗಿದ್ದ ಸೂರ್ಯವಂಶಿ, ಇದೀಗ ಹರಾಜಿನಲ್ಲಿ 1.1 ಕೋಟಿ ರೂಗೆ  ರಾಜಸ್ಥಾನ ರಾಯಲ್ಸ್ ಖರಿದಿಸಿದೆ. ಈ ಮೂಲಕ ಕ್ರಿಕೆಟ್ ಲೋಕವೇ ಹುಬ್ಬೇರುವಂತೆ ಮಾಡಿದೆ.

ಇನ್ನು ಐಪಿಎಲ್ ಪಂದ್ಯದಲ್ಲಿ ಒಂದು ವೇಳೆ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ ಐಪಿಎಲ್ ಇತಿಹಾಸದಲ್ಲೇ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗದ್ದಾರೆ.

ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರ ಪರವಾಗಿ ಆಡಿದ್ದ ವೈಭವ್ ಸೂರ್ಯವಂಶಿ, ಐದು ಪಂದ್ಯಗಳಿಂದ ಸುಮಾರು 400 ರನ್ ಕಲೆ ಹಾಕಿದ್ದರು. ಅಲ್ಲದೆ ಆಸ್ಟ್ರೇಲಿಯಾ ಅಂಡರ್ 19 ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 58 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

Home add -Advt

2011ರಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ನಾಲ್ಕು ವರ್ಷದ ಬಾಲಕರಾಗಿರುವಾಗಲೇ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ವೈಭವ್‌ ಸೂರ್ಯವಂಶಿ 9 ವರ್ಷದವರಾಗಿದ್ದಾಗ, ಅವರ ತಂದೆ ಹತ್ತಿರದ ಸಮಷ್ಠಿಪುರ್ ನಗರದ ಕ್ರಿಕೆಟ್ ಅಕಾಡೆಮಿಯೊಂದಕ್ಕೆ ಅವರನ್ನು ಸೇರ್ಪಡೆ ಮಾಡಿದರು.

Related Articles

Back to top button