Kannada NewsKarnataka NewsLatest

ಬೆಳಗಾವಿ ಜಿಲ್ಲೆಯ 372 ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಜಿಲ್ಲೆಯ 372 ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ ಎಂದು ಸರಕಾರ ತಿಳಿಸಿದೆ.

ವಿಧಾನಪರಿಷತ್ತಿನಲ್ಲಿ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರ ನೀಡಿದ್ದಾರೆ.

Home add -Advt

ಖಾನಾಪುರ ತಾಲೂಕಿನ 106, ಬೆಳಗಾವಿ ತಾಲೂಕಿನ 2, ಹುಕ್ಕೇರಿಯ ತಾಲೂಕಿನ 53, ಬೈಲಹೊಂಗಲ ತಾಲೂಕಿನ 42, ರಾಮದುರ್ಗ ತಾಲೂಕಿನ 29, ಕಿತ್ತೂರಿನ 22, ಗೋಕಾಕದ 62, ಸವದತ್ತಿಯ 2, ಮೂಡಲಗಿಯ 16, ಚಿಕ್ಕೋಡಿಯ 12, ನಿಪ್ಪಾಣಿ 3, ಅಥಣಿ 5 ಹಾಗೂ ರಾಯಬಾಗ ತಾಲೂಕಿನ 18 ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಜಿಲ್ಲೆಯಲ್ಲಿ ಒಟ್ಟೂ 816 ಸ್ಮಶಾನಗಳಿವೆ.

ಸ್ಮಶಾನಕ್ಕೆ ಸರಕಾರ ಜಾಗ ಲಭ್ಯವಿಲ್ಲದ ಪ್ರದೇಶದಲ್ಲಿ ಖಾಸಗಿಯವರಿಂದ ಜಮೀನು ಖರೀದಿಗೆ 26 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಕುರಿತು ಇನ್ನಷ್ಟು ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – Barial Ground LA Question

 

Related Articles

Back to top button