Cancer Hospital 2
Beereshwara 36
LaxmiTai 5

ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳು ಆಗಿವೆ:ಡಿಕೆ ಶಿವಕುಮಾರ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೊಂದು ಹುದ್ದೆ ಇಷ್ಟು ಎಂದು ನಿಗದಿ ಮಾಡಿ ವಸೂಲಿ ಮಾಡುತ್ತಿದ್ದರೂ, ಹಲವು ಪತ್ರಿಕೆಗಳಲ್ಲಿ ಅಂಕೆ ಸಂಖ್ಯೆ ಸಹಿತ ವರದಿ ಪ್ರಕಟವಾಗಿದೆ. ಇದನ್ನೇ ಆಧಾರವಾಗಿ ನಾವು ಬಿಜೆಪಿ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಆರೋಪ ಮಾಡಲಾಯಿತು. ಇದು ತಪ್ಪು ಎಂದು ಸಿಎಂ ಹಾಗೂ ನನ್ನನ್ನು ಕೋರ್ಟ್ ಗೆ ಕರೆಸಿಕೊಂಡಿದ್ದಾರೆ. ಇದೇ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಹ ಖಾಸಗಿ ದೂರು ದಾಖಲಿಸಲಾಗಿದೆ. ರಾಹುಲ್ ಗಾಂಧಿ ಸಹ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ. ಇವರ ಆಡಳಿತಾಧಿಯಲ್ಲಿ ಹಗರಣಗಳು ಹಲವು ಆಗಿವೆ. ನಾವು ಸುಮ್ಮನೆ ಇದ್ದರೂ ರಾಜಕೀಯ ಮಾಡಲು ಬಿಜೆಪಿ ನಾಯಕರೇ ಆಹ್ವಾನಿಸುತ್ತಿದ್ದಾರೆ  ಎಂದರು.‌ 

Emergency Service

ನಾವು ಸಹ ರಾಜಕೀಯ ಮಾಡಲು ಸಿದ್ಧ. ನಾನು ಬಿಜೆಪಿ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿಲ್ಲ. ಹಲವು ಪತ್ರಿಕೆಗಳಲ್ಲಿ ಬಂದ ಸುದ್ದಿ ಹಾಗೂ ಅವರ ಪಕ್ಷದ ಯತ್ನಾಳ್ ಸೇರಿದಂತೆ ಇತರೆ ನಾಯಕರು ನೀಡಿದ ಹೇಳಿಕೆಗಳ ಮೇಲೆ ನಾವು ಜಾಹೀರಾತು ಸಿದ್ಧಪಡಿಸಿ ಚುನಾವಣೆ ವೇಳೆ ಜನರಿಗೆ ಮನವರಿಕೆ ಮಾಡಿಕೊಡಲಾಗಿತ್ತು ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಎಲ್ಲಾ ಹಗರಣಗಳ ಬಗ್ಗೆಯೂ ತನಿಖೆಯ ನಡೆಸಲಾಗುವುದು.  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆಯೂ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ. ಯಾರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದರು.

Bottom Add3
Bottom Ad 2