*ಬೆಳಗಾವಿಯಲ್ಲಿ ಮನೆ ಬಾಗಿಲು ಮುರಿದು 700 ಗ್ರಾಂ ಚಿನ್ನ ಕದ್ದು ಕಳ್ಳರು ಪರಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳ್ಳಂ ಬೆಳಿಗ್ಗೆ 3ರಿಂದ 4 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿ 700 ಗ್ರಾಂ ಚಿನ್ನ ದೋಚಿ ಪರಾರಿಯಾದ ಘಟನೆ ಗೋಕಾಕ ಪಟ್ಟಣದಲ್ಲಿ ನಡೆದಿದೆ.
ಗೋಕಾಕ ಪಟ್ಟಣದ ವಿದ್ಯಾನಗರದಲ್ಲಿನ ವ್ಯಾಪಾರಸ್ಥ ಶ್ರೀರಾಮ ಚೌದರಿಯವರ ಮನೆಯಲ್ಲಿಟ್ಟಿದ್ದ 700 ಗ್ರಾಂ ಚಿನ್ನ ಕಳ್ಳತನ ಆಗಿದ್ದು ಸುದ್ದಿ ತಿಳಿದ ನಗರ ಠಾಣೆಯ CPI ಸುರೇಶಬಾಬು ಬಂಡಿವಡ್ಡರ ಮತ್ತು ನಗರ ಪಿ,ಎಸ್,ಐ, ಕೆ.ವಾಲಿಕಾರ ಇವರು ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬಿಸಿದ್ದಾರೆ.
ಇನ್ನು ಶ್ರೀರಾಮ ಚೌದರಿ ಇವರು ಬೇರೆ ಊರಿಗೆ ಹೊಗಿದ್ದನ್ನು ಗಮನಿಸಿದ ಕಳ್ಳರು ಮೊದಲು ಬೇರೆಯೊಬ್ಬರ ಮನೆಗೆ ಕಳ್ಳತನಕ್ಕೆ ಹೊಗಿದ್ದಾರೆ. ಅಲ್ಲಿ ಏನು ಸಿಗದ ಕಾರಣ ಪಕ್ಕದಲ್ಲಿದ್ದ ಶ್ರೀರಾಮ ಚೌದರಿ ಇವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಯ ಬಾಗಿಲಿನ ಬೀಗ ಮುರಿದು 700 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾರೆ.
ಕಳ್ಳತನಕ್ಕೆ ಮನೆಯ ಮಾಲಿಕ ಶ್ರೀರಾಮ ಚೌದರಿಯವರ ನಿರ್ಲಕ್ಷವೆ ಕಾರಣ ಅಂತ ಅನ್ನಬಹುದು ಯಾಕೆಂದರೆ ದಿನಂಪ್ರತಿ ನಗರ ಪೋಲಿಸರು ಸಾರ್ವಜನಿಕರಿಗೆ,
ವ್ಯಾಪಾರಸ್ಥರಿಗೆ ,ಇನ್ನುಳಿದವರಿಗೂ ಕೂಡ ಸಿಸಿ ಟಿವಿ ಅಳವಡಿಕೆ ಹಾಗೂ ಬೇರೆ ಊರಿಗೆ ಹೊಗುವಾಗ ಸ್ಥಳಿಯ ಪೋಲಿಸ್ ಠಾಣೆಗೆ ತಿಳಿಸಲು ತಿಳಿಸಿದರು ಸಹ ಸಾರ್ವಜನಿಕರು ನಿರ್ಲಕ್ಷ ತೊರುತ್ತಿರುವದರಿಂದ ಇಂತಹ ಕಳ್ಳತನ ಆಗುತ್ತಿದೆ. ಇನ್ನಾದರೂ ಸಾರ್ವಜನಿಕರು ಸಿಸಿಟಿವಿ ಅಳವಡಿಸಿ ಕಾನೂನಿಗೆ ಸಹಕರಿಸಬೇಕಾಗಿದೆ, ಆಗ ಮಾತ್ರ ಕಳ್ಳತನಕ್ಕೆ ಬ್ರೇಕ್ ಹಾಕಲು ಸಾದ್ಯ.