Belagavi NewsBelgaum News

*ಗ್ಯಾಸ್ ಕಟರ್ ಬಳಸಿ ಎಟಿಎಂ ದೋಚಿದ ಖದೀಮರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿಯ ಎಸ್ ಬಿ ಐ ಎಟಿಂ ಗೆ ಖದೀಮರು ಕನ್ನ ಹಾಕಿದ್ದಾರೆ. ತಡರಾತ್ರಿ ಸರಿ ಸುಮಾರು 2 ಗಂಟೆಯ ಹೊತ್ತಿಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ನಾಲ್ವರು ಖದೀಮರು ಎಟಿಎಂ ನಲ್ಲಿದ್ದ 75,600 ರೂ ಹಣ ಎಗರಿಸಿ ಪರಾರಿಯಾಗಿದ್ದಾರೆ

ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಎಟಿಎಂ ಕಳ್ಳತನವಾಗಿರುವ ಘಟನೆ ನಡೆದಿದ್ದು ಗ್ಯಾಸ್ ಕಟರ್ ಮಷಿನ್ ಬಳಸಿ ಎಟಿಎಂ ಕಳ್ಳತನ ಮಾಡಲಾಗಿದೆ.‌ ಸಾಂಬ್ರಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಎಸ್ ಬಿ ಐಗೆ ಸೇರಿದ ಎಟಿಎಂ ಇದಾಗಿದ್ದು, ಎಟಿಎಂ ನಲ್ಲಿ ಇದ್ದ 75 ಸಾವಿರ ‌ರೂಪಾಯಿ ಕಳ್ಳತನ ಮಾಡಲಾಗಿದೆ. ಎಟಿಎಂನಲ್ಲಿ ಇರೋ ಸಿಸಿಟಿವಿಗೆ ಸ್ಪ್ರೇ ಮಾಡಿ, ಬಳಿಕ ಎಟಿಎಂ ಕಳ್ಳತನ ಮಾಡಿ ಗ್ಯಾಂಗ್ ‌ಎಸ್ಕೆಪ್ ಆಗಿದೆ. ಕಳ್ಳರ ಗ್ಯಾಂಗ್ ಕಾರಿನಲ್ಲಿ ಎಟಿಎಂ ಕಳ್ಳತನಕ್ಕೆ ಬಂದಿರುವ ದೃಶ್ಯಗಳು ಲಭ್ಯವಾಗಿದೆ.‌ 

ಸಾಂಬ್ರಾ ಗ್ರಾಮದಲ್ಲಿ ಎಟಿಎಂ ಕಳ್ಳತನ ಮಾಡಿದ ಕಳ್ಳರು ಬಳಿಕ ಮಹಾರಾಷ್ಟ್ರ ಕೊಲ್ಹಾಪುರದ ಅಜರಾ ಗ್ರಾಮದಲ್ಲಿ ಮತ್ತೊಂದು ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ.‌ ಅಜರಾ ಗ್ರಾಮದಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದಾಗ ಬೆಳಕಾಗಿದ್ದರಿಂದ ಕಳ್ಳತನ ಸಾಧ್ಯವಾಗದೆ ಗ್ಯಾಂಗ್ ಎಸ್ಕೆಪ್ ಆಗಿದೆ ಎನ್ನಲಾಗಿದೆ. 

ಇನ್ನು ಸಾಂಬ್ರಾ ಗ್ರಾಮದಲ್ಲಿ ಎಟಿಎಂ ಕಳ್ಳತನವಾಗಿರುವ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಮೂರು ತಂಡ ರಚನೆ ಮಾಡುತ್ತೇವೆ ಎಂದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button