ಬಂಗಾರದ ಆಭರಣ ದೋಚಿದ್ದ ಕಳ್ಳರ ಬಂಧನ
ಪ್ರಗತಿ ವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿ ತಾಲೂಕಿನ ಚಿನ್ನದ ವ್ಯಾಪಾರಿಯೊಬ್ಬರನ್ನು ಕಳೆದ ಏ.8 ರಂದು ರಸ್ತೆಯಲ್ಲಿ ಅಡ್ಡಗಟ್ಟಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದ ಪ್ರಕರಣದಲ್ಲಿ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ.
ಪ್ರದೀಪ ಅನೀಲ ಕಾಂಬ್ಳೆ, ಅವಧೂತ ಬಾಹುಸಾಹೇಬ ಕೋಳಿ, ಅಕ್ಷಯ ಅಶೋಕ ಕೊಂಡಿಗೇರಿ, ಪಂಕಜ್ ಸಂಜು ಕೋಳಿ ಬಂಧಿತ ಆರೋಪಿಗಳು.
ಪ್ರಕರಣದ ವಿವರ
ಏ.8 ರಂದು ರಾತ್ರಿ ದೋಂಡಿರಾಮ ವಿಷ್ಣು ಕುಸಾಳೆ ಅವರು ಅಂಗಡಿಯಲ್ಲಿ ವ್ಯಾಪಾರ ಮುಗಿಸಿಕೊಂಡು 5.50 ಲಕ್ಷ ಮೌಲ್ಯದ75 ಗ್ರಾಂ ಬಂಗಾರದ ಆಭರಣಗಳು ಹಾಗೂ 2.50 ಕಿಲೋ ತೂಕದ ಬೆಳ್ಳಿಯ ಆಭರಣಗಳುನ್ನು ತೆಗೆದುಕೊಂಡು ತಮ್ಮ ಊರಾದ ಮಾಂಗೂರಿಗೆ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಭೀವಶಿ ಕ್ರಾಸ್ ಬಳಿ ಬೈಕ್‌ನಲ್ಲಿ ಬೆನ್ನಟ್ಟಿ ಬಂದ ಆರೋಪಿಗಳು ದೋಂಡಿರಾಮ ವಿಷ್ಣು ಕುಸಾಳೆ ಅವರನ್ನು ಅಡ್ಡಗಟ್ಟಿ ಬೈಕ್‌ನಿಂದ ಕೆಡವಿ, ಆಭರಣಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದರು.
ಈ ಬಗ್ಗೆ ದೋಂಡಿರಾಮ ಅವರು ಏ.9 ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಎಲಿಗಾರ ಮಾರ್ಗದರ್ಶನದಲ್ಲಿ ನಿಪ್ಪಾಣಿ ಸಿಪಿಐ ಸಂಗಮೇಶ ವಿ. ಶಿವಯೋಗಿ ನೇತ್ರತ್ವದಲ್ಲಿ ನಿಪ್ಪಾಣಿ ಗ್ರಾಮೀಣ ಪಿಎಸ್‌ಐ ಅನೀಲ್ ಕುಂಬಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿರುವ ಪೊಲೀಸರು, ಬಂಧಿತರಿಂದ 75 ಗ್ರಾಂ ಚಿನ್ನದ ಆಭರಣಗಳು, 2.5 ಕೆಜಿ ಬೆಳ್ಳಿಯ ಆಭರಣಗಳು, ಕೃತ್ಯಕ್ಕೆ ಬಳಸಿದ ೨ ಬೈಕ್‌ಗಳು, ೪ ಮೋಬೈಲ್ ಸೇರಿದಂತೆ 6.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
https://pragati.taskdun.com/latest/vidhanasoudhabomb-threataccused-arrest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ