Kannada NewsKarnataka NewsNationalPoliticsWorld

*ಅಮೆರಿಕಾದಿಂದ 112 ಜನರ ಮೂರನೆ ತಂಡ ಭಾರತಕ್ಕೆ ವಾಪಸ್*

ಪ್ರಗತಿವಾಹಿನಿ ಸುದ್ದಿ: ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಮೂಲದ ನಿವಾಸಿಗಳ ಮೂರನೇ ತಂಡ ನಿನ್ನೆ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿದಿದೆ.

112 ಜನರ ಭಾರತೀಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಭಾನುವಾರ ರಾತ್ರಿ 10 ಗಂಟೆಗೆ ಅಮೃತಸರ ವಿಮಾನ ನಿಲ್ದಾಣವನ್ನ ತಲುಪಿದೆ. ಮೂರನೇ ತಂಡದಲ್ಲಿ ಪಂಜಾಬ್‌ನ 31 ಜನರು, ಹರಿಯಾಣದ 44 ಜನರು, ಗುಜರಾತ್‌ನ 33 ಜನರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ತಲಾ ಒಬ್ಬರು ಮತ್ತು ಉತ್ತರ ಪ್ರದೇಶದಿಂದ ಇಬ್ಬರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಉನ್ನತಮಟ್ಟದ ಅಧಿಕಾರಿಗಳು ಎಲ್ಲರನ್ನು ಬರಮಾಡಿಕೊಂಡಿದ್ದು, ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಮನೆಗಳಿಗೆ ಕಳುಹಿಸಲಾಗುತ್ತದೆ. ಇನ್ನು ಶನಿವಾರ ರಾತ್ರಿ ಬಂದಿಳಿದ ಎರಡನೇ ಬ್ಯಾಚ್‌ನಲ್ಲಿ 119 ಅಕ್ರಮ ಭಾರತೀಯ ವಲಸಿಗರು ಬಂದಿದ್ದರು. ಈ ಪೈಕಿ 67 ಪಂಜಾಬ್‌ನಿಂದ, 33 ಹರಿಯಾಣದಿಂದ, 8 ಗುಜರಾತ್‌ನಿಂದ, 3 ಉತ್ತರ ಪ್ರದೇಶದಿಂದ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮು & ಕಾಶ್ಮೀರದಿಂದ ತಲಾ ಒಬ್ಬರು ಇದ್ದರು.

ಕಳೆದ ವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ 104 ಅಕ್ರಮ ಭಾರತೀಯ ವಲಸಿಗರನ್ನು US ಸೇನಾ ವಿಮಾನದಲ್ಲಿ ಭಾರತಕ್ಕೆ ರವಾನಿಸಲಾಗಿತ್ತು. ಅವರಲ್ಲಿ ತಲಾ 33 ಮಂದಿ ಹರಿಯಾಣ ಮತ್ತು ಗುಜರಾತ್ ಮತ್ತು 30 ಪಂಜಾಬ್‌ಗೆ ಸೇರಿದವರಾಗಿದ್ದರು.

Home add -Advt

ಈ ಬಾರಿಯೂ ಕೈಗೆ ಕೋಳ ತೊಡಿಸಿ, ಹಿಂಸಾತ್ಮಕವಾಗಿ ಅವರನ್ನು ಕಳುಹಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button