ಜಾಗತಿಕ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾಗತಿಕ ಕುಸ್ತಿ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಬೆಳಗಾವಿಗೆ ಕೀರ್ತಿ ತಂದ ಅತುಲ ಸುರೇಶ ಶಿರೋಲೆ ಇವರನ್ನು ಆಂಜನೇಯ ನಗರ ಬಾಸ್ ಜಿಮ್ ವತಿಯಿಂದ ್ಸತ್ಕರಿಸಿ ಗೌರವಿಸಲಾಯಿತು.
ಸೆಪ್ಟಂಬರ್ ೧ರಿಂದ ೮ರವರೆಗೆ ದಕ್ಷಿಣ ಕೋರಿಯಾದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅತುಲ್ ಇವರಿಗೆ ತೃತೀಯ ಸ್ಥಾನ ಲಭಿಸಿದೆ. ಜಗತ್ತಿನ ಒಟ್ಟು ೧೫೦ ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಬಾಸಜಿಮ್ ವತಿಯಿಂದ ನಡೆದ ಸತ್ಕಾರ ಕಾರ್ಯಕ್ರಮದಲ್ಲಿ ಇಂಜಿನೀಯರ್ ಚಂದ್ರಶೇಖರ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಸಜಿಮ್ ಅಧೀಕ್ಷಕಿ ವಿದ್ಯಾವತಿ ಗೌಡರ, ತರಬೇತುದಾರ ಗಂಗಾಧರ ಎಂ, ಆಗಮಿಸಿದ್ದರು. ಆರಂಭದಲ್ಲಿ ಭೂಷಣ ಸ್ವಾಗತಿಸಿದರು, ಸುಚಿತ್ರಾ ನಿರೂಪಿಸಿದರು. ಸಮ್ರಾಟ ಜಾಧವ ವಂದಿಸಿದರು.
ಅತುಲ್ ಅವರು ತಮ್ಮ ಅಜ್ಜನ ಕಾಲದಿಂದಲೂ ಬಂದಂತಹ ಕುಸ್ತಿ ಹವ್ಯಾಸವನ್ನು ಬಾಲ್ಯದಿಂದಲೇ ರೂಢಿಸಿಕೊಂಡು ಬಂದಿದ್ದಾರೆ. ಪ್ರಸಕ್ತ ಲಭಿಸಿದ ಬಹುಮಾನ ಜಾಗತಿಕ ಮಟ್ಟದಲ್ಲಿ ೩ನೇಯದ್ದಾಗಿದೆ. ಈ ಹಿಂದೆ ಅವರು ರಷ್ಯಾ, ತುರ್ಕಿಸ್ತಾನ ರಾಷ್ಟ್ರಗಳಲ್ಲೂ ಭಾಗವಹಿಸಿ ಬಹುಮಾನ ಪಡೆದುಕೊಂಡ ಹೆಗ್ಗಳಿಕೆ ಇವರದ್ದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ