Kannada NewsKarnataka News

*ಬೀದಿನಾಯಿ ದಾಳಿಗೆ ಪುಟಾಣಿ ಸಾವು*

ಪ್ರಗತಿವಾಹಿನಿ ಸುದ್ದಿ: ಬೀದಿನಾಯಿ ದಾಳಿಗೆ ಪುಟಾಣಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಬೀದಿ ನಾಯಿಗಳ ದಾಳಿಯ ತೀವ್ರತೆಗೆ ಮಗುವಿನ ಕರುಳು ಹೊರಬಂದಿದೆ. ಈ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ಅಯ್ಯನಬಾವಿ ನಿವಾಸಿ ದಿವ್ಯಾ (6) ಮೃತ ದುರ್ದೈವಿ.

ದಿವ್ಯಾ ಮನೆಯ ಮುಂದೆ ಆಟವಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆಯೇ ಬೀದಿ ನಾಯಿಗಳ ಹಿಂಡೊಂದು ದಾಳಿ ನಡೆಸಿತ್ತು. ಮನೆಯ ಬಳಿ ಯಾರೂ ಇಲ್ಲದ್ದರಿಂದ ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ತಿಂದು ಹಾಕಿತ್ತು. ಕೊನೆಗೆ ಸ್ಥಳೀಯರು ಚೀರಾಟ ಕೇಳಿ ಓಡಿ ಬರುವಷ್ಟರಲ್ಲಿ ದಿವ್ಯಾ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಕೂಡಲೇ ತಿಪಟೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಷ್ಟರಲ್ಲಿ ಮಗು ಸಾವನ್ನಪ್ಪಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button