Kannada NewsKarnataka News

*ಈಜುಕೊಳದಲ್ಲಿ ಜಂಪ್ ಮಾಡುವಾಗ ದುರಂತ: ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಈಜುಕೊಳದಲ್ಲಿ ಎತ್ತರದಿಂದ ಜಂಪ್ ಮಾಡಿದಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಈಜುಕೊಳಕ್ಕೆ ಹೋಗಿದ್ದ. ಈ ವೇಳೆ ಇಂದ್ರೇಶ್ (17) ಎಂಬಾತ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

Home add -Advt

ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಎತ್ತರದಿಂದ ಡೈ ಹೊಡೆಯುವಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೆಲ ಸಮಯ ಈಜುಕೊಳದಲ್ಲಿ ಈಜಾಡಿದ ಇಂದ್ರೇಶ್ ಮೇಲಿನಿಂದ ಡೈ ಹೊಡೆದಿದ್ದಾನೆ. ಈ ವೇಳೆ ತಲೆಗೆ ಪೆಟ್ಟು ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇಂದ್ರೇಶ್ ಕಾಣದಿದ್ದಾಗ ಸ್ನೇಹಿತರು ಆತಂಕದಿಂದ ಈಜುಕೊಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗೆ ಇಂದ್ರೇಶ್ ಈಜುಕೊಳದಲ್ಲೇ ಮುಳುಗಿರುವುದು ಕಂಡುಬಂದಿದೆ. ನಂತರ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button