Kannada NewsKarnataka NewsLatest

*ಮೊಬೈಲ್ ಚಾರ್ಜರ್ ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಮೊಬೈಲ್ ಚಾರ್ಜರ್ ವಿಚಾರವಾಗಿ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ದಿಹಳ್ಳಿಯಲ್ಲಿ ನಡೆದಿದೆ.

18 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಆಶಾ ಕಾರ್ಯಕರ್ತೆಯಾಗಿರುವ ವರಲಕ್ಷ್ಮಮ್ಮ ಎಂಬುವವರ ಮಗ.

Home add -Advt

ನಿಖಿಲ್ ಪಾವಗಡದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಗದಲ್ಲಿ ಓದುತ್ತಿದ್ದ. ತನ್ನ ತಾಯಿ ಬಳಿ ಮೊಬೈಲ್ ಚಾರ್ಜರ್ ಕೊಡುವಂತೆ ಕೇಳಿದ್ದ. ಇದಕ್ಕೆ ತಾಯಿ ತನ್ನ ಬಳಿ ಚಾರ್ಜರ್ ಇಲ್ಲ ಎಂದು ಹೇಳಿ ಪಕ್ಕದ ಮನೆಗೆ ಹೂ ಕಟ್ಟಲು ಹೋಗಿದ್ದಾರೆ.

ಮನೆಗೆ ವಾಪಸ್ ಆದಾಗ ಮಗ ಎಷ್ಟು ಕರೆದರೂ ಬಾಗಿಲು ತೆರೆದಿಲ್ಲ. ಗಾಬರಿಗೊಂಡ ತಾಯಿ ಅಕ್ಕಪಕ್ಕದವರನ್ನು ಕರೆದಿದ್ದಾರೆ. ಬಾಗಿಲು ಒಡೆದು ಮನೆಯೊಳಗೆ ಹೋದಾಗ ಮಗ ನೇಣಿಗೆ ಕೊರಳೊಡ್ದಿರುವುದು ಗೊತ್ತಾಗಿದೆ. ಸ್ಥಳಕ್ಕೆ ವೈ.ಎನ್.ಹೊಸಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button