Latest

ಕಾಲೇಜು ಆರಂಭಕ್ಕೆ ದಿನಾಂಕ ಘೋಷಿಸಿದ ಯುಜಿಸಿ

 

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು ಆರಂಭಿಸಲು ಯುಜಿಸಿ ಸೂಚನೆ ನೀಡಿದ್ದು, ದಿನಾಂಕವನ್ನೂ ಪ್ರಕಟಿಸಿದೆ.

ಅಕ್ಟೋಬರ್ 31ರೊಳಗೆ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನವೆಂಬರ್ 1ರಿಂದ ತರಗತಿಗಳನ್ನು ಆರಂಭಿಸುವಂತೆ ಯುಜಿಸಿ ತಿಳಿಸಿದೆ. 2021ರ ಮಾರ್ಚ್ 8ರಿಂದ 23ರೊಳಗೆ ಮೊದಲ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ.

2021ರ ಏಪ್ರಿಲ್ 5ರಿಂದ ಎರಡನೆ ಸೇಮಿಸ್ಟರ್ ತರಗತಿಗಳು ಆರಂಭವಾಗಲಿವೆ. ಆಗಸ್ಟ್ 30ಕ್ಕೆ ಎರಡನೆ ಸೇಮಿಸ್ಟರ್ ಅವಧಿ ಮುಕ್ತಾಯವಾಗಲಿದೆ.

ಮಕ್ಕಳು ಕೊರೋನಾ ಹಿನ್ನೆಲೆಯಲ್ಲಿ ಬೇರೆ ಕಾಲೇಜುಗಳಿಗೆ ಪ್ರವೇಶ ಬಯಸಿದರೆ ಅವರ ಕಾಲೇಜು ಶುಲ್ಕವನ್ನು ಪೂರ್ಣ ವಾಪಸ್ ನೀಡಬೇಕು. ನವೆಂಬರ್ 30ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

Related Articles

Back to top button