Latest

ನಟಿ ಉಮಾಶ್ರೀ ಕಾರು ಅಪಘಾತ; ವೈದ್ಯೆ ಸಾವು

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ನಟಿ ಉಮಾಶ್ರೀ ಅವರ ಕಾರು ಹಾಗೂ ಇನ್ನೋಂದು ಕಾರಿನ ನಡುವೆ ಅಪಘಾತ ಸಂಭವುಸಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ನವೆಂಬರ್ 20ರಂದು ಗದಗದಿಂದ ಬರುತ್ತಿದ್ದ ಬಲೆನೋ ಕಾರಿಗೆ ಉಮಾಶ್ರೀ ಅವರ ಮಾಲಿಕತ್ವದ ಇನ್ನೊವಾ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಡಾ.ಸ್ಮಿತಾ ಕಟ್ಟಿ ಕೂಡ ಒಬ್ಬರು.

Home add -Advt

ತೀವ್ರವಾಗಿ ಗಾಯಗೊಂಡಿದ್ದ ಡಾ.ಸ್ಮಿತಾ ಕಟ್ಟಿ ಅವರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸ್ಮಿತಾ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Related Articles

Back to top button