ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಖಾತೆ ಹಂಚಿಕೆ ಅಸಮಾಧಾನ ತೀವ್ರಗೊಂಡಿರುವ ಬೆನ್ನಲ್ಲೇ ಸಚಿವ ಉಮೇಶ್ ಕತ್ತಿ ಹೊಸ ವರಸೆ ಆರಂಭಿಸಿದ್ದು, ನಾನು ಇದೇ ಅವಧಿಯಲ್ಲಿ ಸಿಎಂ ಆಗುತ್ತೇನೆ ಎನ್ನುವ ಮುಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಕತ್ತಿ, ನಾನು ಸಿಎಂ ಹುದ್ದೆ ಆಕಾಂಕ್ಷಿ ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಿರಿಯನಿದ್ದೇನೆ. ನಾನು ಇದೇ ಅವಧಿಯಲ್ಲಿ ಸಿಎಂ ಆಗುತ್ತೇನೆ. ಜೀವಂತವಾಗಿದ್ದರೆ ಇದೇ ಅವಧಿಯಲ್ಲಿ ಆಗುತ್ತೇನೆ. ಸತ್ತರೆ ಮುಂದಿನ ಅವಧಿಯಲ್ಲಾಗಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಬದಲಿಸುವ ವಿಚಾರವಾಗಿ, ಈ ಬಗ್ಗೆ ಜನರ ಮುಂದೆ ಚರ್ಚೆಯಾಗಬೇಕು. ಜನರು ಏನು ಹೇಳುತ್ತಾರೆ ಹಾಗೆ ಮಾಡುವುದು ಒಳ್ಳೆಯದು ಎಂದು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆ: ಕಂಟ್ರೋಲ್ ರೂಮ್ ಆರಂಭ ; ನಾಳೆಯಿಂದ ನೀತಿಸಂಹಿತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ