ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಡಚಿ ರೈಲು ನಿಲ್ದಾಣದ ಹತ್ತಿರ ಜ.೩೧ ರಂದು ವ್ಯಕ್ತಿ ಮೃತ ದೇಹ ಪತ್ತೆಯಾಗಿದೆ. ಯಾವುದೋ ಖಾಯಿಲೆಯಿಂದ ಸ್ವಾಭಾವಿಕವಾಗಿ ಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೃತನ ವಯಸ್ಸು ೬೦-೬೫ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಎತ್ತರ ೫-೬ ಇರುತ್ತದೆ. ಸಾದಾಗಪ್ಪು ಮೈ ಬಣ್ಣ, ಮೈಯಿಂದ ಸಾಧಾರಣ, ಉದ್ದ ಮುಖ, ತಲೆಯಲ್ಲಿ ಕಪ್ಪು ಬಿಳಿ ಕೂದಲು ಹಾಗೂ ಮೀಸೆ ದಾಡಿಬಿಟ್ಟಿರುತ್ತಾರೆ. ಕೊರಳಲ್ಲಿ ನೀಲಿ ಬಣ್ಣದ ಸರ, ಬಲಗೈಲ್ಲಿ ರುದ್ರಾಕ್ಷಿ ಸರ, ಎರಡು ಕಾಲಲ್ಲಿ ಕಪ್ಪು ದಾರ, ಕೇಸರಿ ಬಣ್ಣದ ಡಿಸೈನ್ ಪುಲ್ ಶರ್ಟ್ ಮತ್ತು ಕೇಸರಿ ಬಣ್ಣದ ಲುಂಗಿ ಧರಿಸಿರುತ್ತಾರೆ.
ಸದರಿ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ತಿಳಿದು ಬಂದಲ್ಲಿ ನಗರದ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ೦೮೩೧-೨೪೦೫೨೭೩, ರೈಲ್ವೆ ಪೊಲೀಸ್ ಠಾಣೆ ನಿಯಂತ್ರಣ ಕೊಠಡಿ ದೂರವಾಣಿ ೦೮೦-೨೨೮೭೧೨೯೧ ಅಥವಾ ಪಿಎಸ್ಐ ಮೊ:೯೪೮೦೮೦೨೧೨೭ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ