Kannada NewsKarnataka NewsLatest

*ವಜ್ರಮುಷ್ಠಿ ಕಾಳಗ: ಪ್ರದೀಪ್ ಜೆಟ್ಟಿ ತಲೆಯಿಂದ ಚಿಮ್ಮಿದ ರಕ್ತ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದ ಕೊನೇ ದಿನವಾದ ಇಂದು ವಿಜಯದಶಮಿ ಹಿನ್ನೆಲೆಯಲ್ಲಿ ಅರಮನೆ ಸಂಪ್ರದಾಯದಂತೆ ವಜ್ರಮುಷ್ಠಿ ಕಾಳಗ ನಡೆಯಿತು.

ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಜಗ ಜಟ್ಟಿಗಳ ನಡುವಿನ ಕಾದಾಟದಲ್ಲಿ ರಕ್ತ ಚಿಮ್ಮುವವರೆಗೂ ಹೋರಾಟ ನಡೆಸಿದ್ದು, ಸಾವಿರಾರು ಜನರು ಈ ಕಾಳಗಕ್ಕೆ ಸಾಕ್ಷಿ ಆದರು.

ವಜ್ರಮುಷ್ಠಿ ಕಾಳಗದಲ್ಲಿ ಪ್ರಮೋದ್ ಜಟ್ಟಿಯಿಂದ ಚಾಮರಾಜನಗರದ ವೆಂಕಟೇಶ್ ಜಟ್ಟಿಗೆ ಪ್ರಹಾರ ಮಾಡಲಾಯಿತು. ಇದೇ ವೇಳೆ ಚನ್ನಪಟ್ಟಣದ ಪ್ರವೀಣ್ ಜಟ್ಟಿ ಮೈಸೂರಿನ ಪ್ರದೀಪ್ ಜಟ್ಟಿಗೆ ಪ್ರಹಾರ ಮಾಡಿದ್ದು ತಲೆಯಿಂದ ರಕ್ತ ಚಿಮ್ಮಿತು. ಜಟ್ಟಿಗಳ ನಡುವೆ ನಡೆದ ವಜ್ರಮುಷ್ಠಿ ಕಾಳಗ ರೋಚಕವಾಗಿತ್ತು.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button