ಹೆಸರು ಕಾಳು ಹಾಗೂ ಉದ್ದಿನ ಕಾಳು ಖರೀದಿ ಕೇಂದ್ರಗಳ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ ೧೮ ಮತ್ತು ಸೆಪ್ಟಂಬರ್ ೨೭ ರಂದು ನಡೆದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಬೆಂಬಲ ಬೆಲೆ ಸಭೆಯ ತೀರ್ಮಾನದನ್ವಯ ಸರ್ಕಾರದ ವತಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಾದ ಸವದತ್ತಿ, ರಾಮದುರ್ಗ, ಬೈಲಹೊಂಗಲ, ದೊಡವಾಡ, ಸಂಕೇಶ್ವರ ಮತ್ತು ಅಥಣಿಗಳಲ್ಲಿ ಹೆಸರು ಕಾಳು ಖರೀದಿ ಕೇಂದ್ರಗಳನ್ನು ಮತ್ತು ಅಥಣಿ ಮತ್ತು ಸವದತ್ತಿ ತಾಲೂಕುಗಳಲ್ಲಿ ಉದ್ದು ಕಾಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುತ್ತದೆ.
ಖರೀದಿ ಕೇಂದ್ರಗಳಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು ಮತ್ತು ಉದ್ದಿನ ಕಾಳು ಕೃಷಿ ಉತ್ಪನ್ನಗಳನ್ನು ಕ್ರಮವಾಗಿ ಕ್ವಿಂಟಾಲ್‌ಗೆ ರೂ.೭೦೫೦, ಮತ್ತು ರೂ.೫೭೦೦ ದರಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳರದವರು ಖರೀದಿಸುವರು.
ಪ್ರತಿ ರೈತರಿಂದ ಹೆಸರು ಕಾಳು ಪ್ರತಿ ಎಕರೆಗೆ ೪ ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ ೪ ಕ್ವಿಂಟಾಲ್ ಖರೀದಿ ಪ್ರಮಾಣ ನಿಗಧಿಪಡಿಸಿದೆ. ಉದ್ದು ಕೃಷಿ ಉತ್ಪನ್ನಕ್ಕೆ ಪ್ರತಿ ಎಕರೆಗೆ ೩ ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ ೬ ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿದೆ.
ಹೆಸರು ಕಾಳು ಮತ್ತು ಉದ್ದಿನ ಕಾಳು ಮಾರಾಟ ಮಾಡಲು ಇಚ್ಛಿಸುವ ರೈತರು ತಮ್ಮ ಗುರುತಿನ ಚೀಟಿ, ಪಹಣಿ ಪ್ರತಿ, ಗ್ರಾಮ ಲೆಕ್ಕಾಧಿಕಾರಿಗಳಿಂದ ಹೆಸರು ಕಾಳು ಮತ್ತು ಉದ್ದು ಉತ್ಪನ್ನಗಳ ಬೆಳೆ ದೃಢೀಕರಣ ಪ್ರಮಾಣ ಪತ್ರ ಮತ್ತು ಐ.ಎಫ್.ಎಸ್.ಸಿ. ಕೋಡ್ ಇರುವ ಮತ್ತು ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಂದು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.
ಹೆಸರು ಕಾಳು ಮತ್ತು ಉದ್ದಿನ ಕಾಳು ಖರೀದಿಸಿದ ಮೊತ್ತವನ್ನು ಆರ್.ಟಿ.ಜಿ.ಎಸ್. ಮುಖಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು.
ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು, ವರ್ತಕರು ಖರೀದಿ ಕೇಂದ್ರದಲ್ಲಿ ಹೆಸರು ಕಾಳು ಮತ್ತು ಉದ್ದಿನ ಕಾಳು ಮಾರಾಟಕ್ಕೆ ತಂದಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ದೂರವಾಣಿ ಸಂಖ್ಯೆ: ೯೪೪೯೮೬೪೪೪೫ ಗೆ ಹಾಗೂ ಶಾಖಾ ವ್ಯವಸ್ಥಾಪಕರು, ಗೋಕಾಕ್ ದೂರವಾಣಿ ಸಂಖ್ಯೆ: ೯೪೪೯೮೬೪೪೬೬
ಮತ್ತು ಶಾಖಾ ವ್ಯವಸ್ಥಾಪಕರು, ಅಥಣಿ ಇವರ ಮೊಬೈಲ್ ಸಂಖ್ಯೆ: ೯೪೪೯೮೬೪೪೭೧ ಇವರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಪ್ರವಾಸ; ಕುಂದುಕೊರತೆಗಳ ಸಭೆ
ಲೋಕಾಯುಕ್ತ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುಂದುಕೊರತೆಗಳ ಸಭೆಯನ್ನು ನಡೆಸಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ಅವರು ಆದೇಶಿಸಿರುತ್ತಾರೆ. ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸದರಿ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿರುತ್ತಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧೀಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ತಿಳಿಸಿದ್ದಾರೆ.
ಈ ನಿಮಿತ್ತ ಸೆಪ್ಟೆಂಬರ ೩೦ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ನಿಪ್ಪಾಣಿ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಅಕ್ಟೋಬರ ೩ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮೂಡಲಗಿ ಪುರಸಭೆ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬೆಳಗಾವಿ ಕಛೇರಿ ದೂರವಾಣಿ ಸಂಖ್ಯೆ ೦೮೩೧-೨೪೨೧೫೫೦ ಮತ್ತು ೦೮೩೧-೨೪೨೧೯೨೨ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಹು.ವಿ.ಸ.ಕಂ.ನಿಯ ಪಿಂಚಣಿದಾರರ ಗಮನಕ್ಕೆ
ಬೆಳಗಾವಿಯ ನೆಹರು ನಗರ ಕಚೇರಿಯಿಂದ ಪಿಂಚಣಿ, ಕುಟುಂಬ ಪಿಂಚಣಿಯನ್ನು ಪಡೆಯುತ್ತಿರುವ ನಿವೃತ್ತ ಅಧಿಕಾರಿ, ನೌಕರರು ಮತ್ತು ಕುಟುಂಬ ಪಿಂಚಣಿದಾರರು ಅಕ್ಟೋಬರ್ ೧೫ ರೊಳಗಾಗಿ ಜೀವಂತ, ಮರು ಮದುವೆ ಆಗದೇ ಇರುವ ಪ್ರಮಾಣ ಪತ್ರವನ್ನು, ಅಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್‌ನ ನಕಲು ಪ್ರತಿಯನ್ನು ಕಚೇರಿಗೆ ತಪ್ಪದೇ ಸಲ್ಲಿಸಬೇಕು ಹು.ವಿ.ಸ.ಕಂ.ನಿಯ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಕೊಟ್ಟಿರುವ ಅವಧಿಯ ನಂತರ ಪ್ರಮಾಣ ಪತ್ರ ನೀಡಿದ ಅಥವಾ ನೀಡದೇ ಇರುವ ಪಿಂಚಣಿದಾರರ ಪಿಂಚಣಿಯನ್ನು ತಡೆಹಿಡಿಯಲಾಗುವುದು ಎಂದು ಬೆಳಗಾವಿ ನೆಹರು ನಗರದ ಹು.ವಿ.ಸ.ಕಂ.ನಿಯ ಕಾರ್ಯ ಮತ್ತು ಪಾಲನೆ ನಗರ ವಿಭಾಗ ದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ