ವಿಶೇಷ ಸಾರಿಗೆ ಸೌಲಭ್ಯ
ಬೆಳಗಾವಿ : ಶ್ರೀ ಯಲ್ಲಮ್ಮಾದೇವಿ ದಸರಾ ಜಾತ್ರೆಯು ಅ.೧೪ ೨೦೨೩ ರಿಂದ ಅ.೨೪ ೨೦೨೩ ರ ವರೆಗೆ ವಿಜೃಂಭನೆಯಿಂದ ಜರುಗಲಿದ್ದು, ಜಾತ್ರೆಯ ಮುಖ್ಯ ದಿನಗಳು ಅ.೧೫, ೧೭, ೨೦ ಹಾಗೂ ಅ.೨೨ ರಂದು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಸದರಿ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ ಕೇಂದ್ರ ನಗರ ಬಸ್ ನಿಲ್ದಾಣದಿಂದ ಯಲ್ಲಮ್ಮಾಗುಡ್ಡದ ವರಗೆ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಾಕರಸಾಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಮರಣ
ಬೆಳಗಾವಿ : ನಗರದ ರಸ್ತೆ ಬದಿಯಲ್ಲಿ ಸೆ. ೨೩ ೨೦೨೩ ರಂದು ೧ ೫೦ ಗಂಟೆಗೆ ಅಸ್ವಸ್ಥನಾಗಿ ಕುಳಿತ ವ್ಯಕ್ತಿಯನ್ನು ಗಮನಿಸಿದ ಅಪರಿಚಿತರು ೧೦೮ ಅಂಬ್ಯುಲನ್ಸ ವಾಹನಕ್ಕೆ ಕರೆ ಮಾಡಿ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಅಪರಿಚಿತ ವ್ಯಕ್ತಿ (೬೦) ಯನ್ನು ದಾಖಲು ಮಾಡಿ ಅವನಿಗೆ ಚಿಕಿತ್ಸೆ ನೀಡಿ ಉಪಚರಿಸಿ ನಂತರ ಪುರುಷರ ಡಿ ವಾರ್ಡನಲ್ಲಿ ಒಳರೋಗಿ ಅಂತಾ ದಾಖಲಾಗಿದ್ದ ವ್ಯಕ್ತಿ ಅ.೧೦ ೨೦೨೩ ರಂದು ಬೆಳಿಗ್ಗೆ ೫ ೩೦ ಗಂಟೆಗೆ ಮರಣ ಹೊಂದಿರುತ್ತಾನೆ.
ಅಪರಚಿತ ವ್ಯಕ್ತಿಯ ಚಹರೆ ಪಟ್ಟಿ: ಎತ್ತರ ೫.೬ ಪುಟ್ ಸಾದಗೆಂಪ್ಪು ಮೈಬಣ್ಣ, ನೆಹರು ಶರ್ಟ ಬಿಳಿ ಬಣ್ಣದ ಪೈಜಾಮು ಹಾಗೂ ಕೆಂಪು ಬಣ್ಣದ ಹಾರ್ಪ ಸ್ವೇಟರ ಧರಿಸಿರುತ್ತಾರೆ.
ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ದೂರೆತಲ್ಲಿ ಎಪಿ.ಎಮ್.ಸಿ. ಪೊಲೀಸ್ ಠಾಣೆ ಬೆಳಗಾವಿ, ಎ.ಪಿ.ಎಮ್.ಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ (೦೮೩೧) ೨೪೦೫೨೫೦ ಗೆ ಅಥವಾ ಪೊಲೀಸ್ ಇನ್ಸಪೆಕ್ಟರ ಮೋಬೈಲ್ ಸಂ ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದಾಗಿದೆ ಎಂದು ಎ.ಪಿ.ಎಮ್.ಸಿ ಪೊಲೀಸ್ ಇನ್ಸಪೆಕ್ಟರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ೨೦೨೩: ಜಿಲ್ಲಾ ಮಟ್ಟದ ಸಮಾರಂಭ
ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು
ಬೆಳಗಾವಿ : ಈಗಿನ ಕಾಲದ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಒಳ್ಳೆಯ ಕಾರ್ಯಗಳಿಗೆ ಬಳಸಬೇಕು ಹಾಗೂ ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಸಮಯವನ್ನು ನೀಡಿ ಅವರ ಭಾವನೆಗಳಿಗೆ ಮಹತ್ವವನ್ನು ನೀಡಬೇಕು ಎಂದು ಹಿರಿಯ ದಿವಾಣಿ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪಿ.ಮುರಳಿಮೋಹನ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸಾರ್ವಜನಿಕರಿಗಾಗಿ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಬೆಳಗಾವಿಯ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ವೈದ್ಯಕೀಯ ಮಹಾವಿದ್ಯಾಲಯ, ಸರಕಾರಿ ಸರದಾರ್ ಪ.ಪೂ. ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕು ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ, ಇವರ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ೨೦೨೩ರ ಅಂಗವಾಗಿ ಅಕ್ಟೋಬರ್ ೧೧, ೨೦೨೩ ರಂದು ಜಿಲ್ಲಾ ಮಟ್ಟದ ಸಮಾರಂಭವನ್ನು ನಗರದ ಬಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಮಾನಸಿಕ ಅಸ್ಥವಸ್ಥತೆ ಮತ್ತು ಬುದ್ದಿಮಾಂದ್ಯತೆಗಳ ನಡುವಿನ ವ್ಯತ್ಯಾಸಗಳೇನು ಹಾಗೂ ಮಾನಸಿಕ ಕಾಯ್ದೆ ೨೦೧೭ ರಲ್ಲಿ ಯಾರೆಲ್ಲಾ ಮಾನಸಿಕ ವೃತ್ತಿ ಪರರಾಗಿ ಕಾರ್ಯವನ್ನು ನಿರ್ವಹಿಸಬೇಕು ಮತ್ತು ಮಾನಸಿಕ ಅಸ್ಥವಸ್ಥರಿಗೆ ಇರುವ ಪುರ್ನವಸತಿ ಕೇಂದ್ರಗಳ ಬಗ್ಗೆ ಹಾಗೂ ಡಿ-ಅಡಿಕ್ಷಣ ಸೆಂಟರ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಾ ಈಗಿನ ಯುವ ಜನತೆಯು ತುಂಬಾ ಒತ್ತಡ ಜೀವನವನ್ನು ನಡೆಸುತ್ತಿದ್ದು ಮಾದಕ ದ್ರವ್ಯ ಮತ್ತು ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಚೇರಮೇನ್ ಆಫ್ ಮೆಂಟಲ್ ಹೆಲ್ತ್ ರಿವಿವ್ ಬೋರ್ಡ ಬೆಳಗಾವಿ ಡಿವಿಜನ್‌ನ ಡಿ.ಆರ್.ರೇಣಕೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ|| ಅಶೋಕ ಕುಮಾರ ಶೆಟ್ಟಿ ಅವರು ಮಾನಸಿಕ ಕಾಯಿಲೆಗಳು ಯಾರಿಗೆ ಬೇಕಾದರು ಬರಬಹುದು. ಕೋವಿಡ್ ನಂತರದ ದಿನಗಳಲ್ಲಿ ಭಯ,ಆತಂಕ ಹಾಗೂ ಖಿನ್ನತೆಯಂತಹ ಕಾಯಿಲೆಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ ಆದ್ದರಿಂದ ಪ್ರತಿಯೊಬ್ಬರು ತಮ್ಮಗೆ ಆಗುತ್ತಿರುವ ಸಮಸ್ಯೆಗಳಿಗೆ ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಪಡೆದುಕೊಳ್ಳಬೇಕು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳೊಂದಿಗೆ ನಯವಾಗಿ ಮಾತನಾಡಿದರೆ ಅವರಿಗೆ ಇರುವಂತಹ ಸಮಸ್ಯೆಗಳಿಗೆ ಅರ್ಧದಷ್ಟು ಚಿಕಿತ್ಸೆಯನ್ನು ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಿದರು.
ಯುವ ಜನತೆಯಲ್ಲಿ ಕಂಡುಬರುವ ಮಾನಸಿಕ ಖಾಯಿಲೆಗಳು ಮತ್ತು ಲಕ್ಷಣಗಳ ಬಗ್ಗೆ ತಿಳಿಸಿದರು. ೧೪೪೧೬ ಇದಕ್ಕೆ ಯಾರೆಲ್ಲಾ ಕರೆ ಮಾಡಿ ಆಪ್ತಸಮಾಲೋಚನೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು. ಮತ್ತು ಬಿಮ್ಸ್ ಆಸ್ಪತ್ರೆ ಬೆಳಗಾವಿ ಇವರು ಒಟ್ಟಾರೆಯಾಗಿ ಮಾನಸಿಕ ಕಾಯಿಲೆಗಳು ಲಕ್ಷಣಗಳು ಹಾಗೂ ಪರಿಹಾರ ಚಿಕಿತ್ಸಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು. ಮನೋವೈದ್ಯರಾದ ಡಾ.ಉತ್ತಮ ಶೇಲಾರ ಹಾಗೂ ಹಿರಿಯ ನಿವಾಸಿ ಮನೋವೈದ್ಯರಾದ ಡಾ.ವಿಜಯಲಕ್ಷ್ಮೀ ಅವರು ಉಪನ್ಯಾಸ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಗೀತಾ ಕಾಂಬಳೆ, ಬಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಎ. ಬಿ. ಪಾಟೀಲ, ನಿವಾಸಿ ವೈದ್ಯಕೀಯ ಅಧಿಕಾರಿಗಳಾದ ಡಾ. ಸರೋಜಾ ತಿಗಡಿ,
ಆರೋಗ್ಯ ಅಧಿಕಾರಿಗಳಾದ ಡಾ.ರಮೇಶ ದಂಡಗಿ, ಸರಕಾರಿ ಸರದಾರ್ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಾಯ್.ಎಮ್.ಪಾಟೀಲ, ಡಿ ಎಮ್ ಹೆಚ್ ಪಿ ಸಿಬ್ಬಂದಿಯವರು, ಜಿ ಎನ್ ಎಮ್ ವಿದ್ಯಾರ್ಥಿಗಳು ಮತ್ತು ಸರಕಾರಿ ಸರದಾರ್ ಪ.ಪೂ ಮಹಾವಿದ್ಯಾಲಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಮ್ಸ್ ಮಹಾವಿದ್ಯಾಲಯದ ಎಮ್.ಬಿ.ಬಿ.ಎಸ್ ವಿದ್ಯಾರ್ಥಿಗಳು ಮಾನಸಿಕ ಕಾಯಿಲೆ ಮತ್ತು ಖಿನ್ನತೆಯಿಂದ ವ್ಯಕ್ತಿ ಯಾವ ರೀತಿ ಆತ್ಮಹತ್ಯೆಗೆ ಬಲಿಯಾಗುತ್ತಾನೆ ಎಂಬ ವಿಷಯದ ಕುರಿತು ಕಿರು ನಾಟಕ ಪ್ರದರ್ಶಿಸಿದರು.
ಬಿಮ್ಸ್ ಆಸ್ಪತ್ರೆ ಮಾನಸಿಕ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಟಿ. ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ಜಿ ಎನ್ ಎಮ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಡಾ.ಸೂಸನ್ ಸ್ವಾಗತಿಸಿದರು, ನಾಗರತ್ನಾ ದೊಡ್ಡಗಾಣಿಗೇರ ವಂದಿಸಿದರು. ಸವಿತಾ ಆ. ತಿಗಡಿ ನಿರೂಪಿಸಿದರು.
ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ
ಬೆಳಗಾವಿ : ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ತುಮಕೂರು ನಲ್ಲಿ ಅಕ್ಟೋಬರ್ ೨೭, ೨೦೨೩ ರಿಂದ ೨೯ ರವರೆಗೆ ನಡೆಸಲಾಗುವುದು.
ಬೆಳಗಾವಿಯಲ್ಲಿ ನಡೆದ ೨೦೨೨-೨೩ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಕ್ರೀಡಾಪಟುಗಳು ಸದರಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಅರ್ಹ ಕ್ರೀಡಾಪಟುಗಳು ಅಕ್ಟೋಬರ್ ೨೭, ೨೦೨೩ ರಂದು ಬೆಳಿಗ್ಗೆ ೯ ಗಂಟೆಯೊಳಗಾಗಿ ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇಲ್ಲಿ ಅಥವಾ ದೂರವಾಣಿ ಸಂಖ್ಯೆ.೦೮೩೧-೨೯೫೦೩೦೬ ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತಂಬಾಕು ಮುಕ್ತವನ್ನಾಗಿಸಲು ಎಲ್ಲರು ಕೈಜೋಡಿಸಬೇಕು: ನಗರ ಪಾಲಿಕೆಯ ಸೇವಕರಾದ ಹನುಮಂತ ಕೊಂಗಾಲಿ ಸಲಹೆ
ಬೆಳಗಾವಿ : ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕ ಬೆಳಗಾವಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅ.೧೧ ೨೦೨೩ ರಂದು ಬೆಳಗಾವಿ ಮಹಾನಗರ ಪಾಲಿಕೆಯ ಕಛೇರಿ ಸಂಭಾಣಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಪರವಾನಿಗೆ ನೀತಿ ಅನುಷ್ಠಾನ ಮತ್ತು ಕೋಟ್ಪಾ-೨೦೦೩ ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೋಳ್ಳಲಾಯಿತು.
ಕಾರ್ಯಾಗಾರವನ್ನು ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಶೋಭಾ ಸೂಮನಾಚೆ ಪೂಜ್ಯ ಉಪ ಮಹಾಪೌರರಾದ ರೇಶ್ಮಾ ಪಾಟೀಲ ಆಡಳಿತ ಪಕ್ಷದ ನಾಯಕರಾದ ರಾಜಶೇಖರ ಡೋಣಿ, ಶ್ರೀಯನ್ ನಾಗಾಡಿ, ರೇಖಾ ಹೂಗಾರ, ರವಿ ಸಾಳುಂಕೆ, ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ನಾಂದ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು/ಕಾರ್ಯಕ್ರಮಧಿಕಾರಿ ಡಾ.ಎಸ್.ಎಸ್. ದೊಡ್ಡಮನಿ ಇವರ ಉಪಸ್ಥಿತಿಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಮಹಾನಗರ ಪಾಲಿಕೆಯ ನಗರ ಸೇವಕರಾದ ಹನುಮಂತ ಕೊಂಗಾಲಿ ಅವರು ಮಾತನಾಡಿ ಕೋಟ್ಪಾ ಕಾಯ್ದೆ ಅನುಷ್ಠಾಣಗೊಳಿಸಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ತಂಬಾಕು ಮುಕ್ತವನ್ನಾಗಿಸಲು ಎಲ್ಲರು ಕೈಜೋಡಿಸಬೆಕೆಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು,ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಡಾ. ಎಸ್.ಎಸ್. ದೊಡ್ಡಮನಿ ಇವರು ಪ್ರಾಸ್ತಾವಿಕ ನುಡಿಯನ್ನು ಮಾತನಾಡುತ್ತಾ
ತಂಬಾಕು ಸೇವನೆಯಿಂದ ತಲೆಯಿಂದ ಕಾಲಿನ ವರೆಗೆ ಪ್ರತಿಒಂದು ಅಂಗಾಂಗದ ಮೇಲೆ ಪರಿಣಾಮ ಬೀರಿ ನಾನಾ ಪ್ರಕಾರದ ರೋಗಗಳಿಗೆ ಅತಿ ಬೇಗ ಯುವ ಪೀಳಿಗೆ ವಿಷಯ ಕಾರ್ಯಾಗಾರಕ್ಕೆ ತಿಳಿಸುತ್ತಾ ತಂಬಾಕು ಉತ್ಪನ್ನಗಳು ಅತಿ ಸುಲಭವಾಗಿ ಲಭ್ಯವಾಗುತ್ತಿರುವುದು ಇಂದಿನ ಸಮಾಜಕ್ಕೆ ಆತಂಕಕಾರಿ ವಿಷಯ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಪರವಾನಿಗೆ ನೀತಿ ಅನುಷ್ಠಾನ ಮತ್ತು ಕೋಟ್ಪಾ ೨೦೦೩ ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಮಾಡಬೆಕೆಂದು ತಿಳಿಸಿದರು.
ಬೆಂಗಳೂರು ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಬಾಗೀಯ ಸಂಯೋಜಕರಾದ ಮಾಹಾಂತೇಶ ಉಳ್ಳಾಗಡ್ಡಿ ಇವರು ಕೋಟ್ಪಾ ಕಾಯ್ದೆಯ ಸೆಕ್ಷನ್ ೪,೫.೬(ಎ) ೬(ಬಿ) ಹಾಗೂ ೭ರ ವಿವರಣೆ ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಉಪನ್ಯಾಸ ನೀಡಿದರು.
ರಾಜ್ಯ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ ಅವರು ತಂಬಾಕು ಉತ್ಪನ್ನ ಉದ್ಯಮ ಪರವಾನಿಗೆ ನೀತಿ ಅನುಷ್ಠಾನದ ಕುರಿತು ಸರಕಾರದ ಆದೇಶ ಹಾಗೂ ಮಾರ್ಗಸೂಚಿಯ ಅನುಷ್ಠಾನ ಕುರಿತು ಉಪನ್ಯಾಸ ನೀಡಿದರು.
ಸದರಿ ಕಾರ್ಯಾಗಾರವು ನಗರ ಸೇವಕರಾದ ಶ್ರೀಯನ್ ನಾಗಾಡಿ, ರೇಖಾ ಹೂಗಾರ, ರವಿ ಸಾಳುಂಕೆ, ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳು ಡಾ.ಎಸ್ ನಾಂದ್ರೆ ಹಾಗೂ ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಕುಮಾರಿ ಕವಿತಾ ರಾಜನ್ನವರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಟಲ್ ಪಿಂಚಣಿ ಯೋಜನೆ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ
ಬೆಳಗಾವಿ : ಅಟಲ್ ಪಿಂಚಣಿ ಯೋಜನೆ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಅಕ್ಟೋಬರ್ ೬, ೨೦೨೩ ರಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ಹಾಗೂ ಬೆಳಗಾವಿ ಜಿಲ್ಲಾ ಅಗ್ರಣೀಯ ಬ್ಯಾಂಕ್, ಕೆನರಾ ಬ್ಯಾಂಕ್ ಇವರ ಸಹಯೋಗದೊಂದಿಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ಕಛೇರಿ ಕಾರ್ಯಕ್ರಮವನ್ನು ಎಂ ರಂಗಪ್ಪ ಎಜಿಎಂ ಅವರು ಉದ್ದೇಶಿಸಿ ಮಾತನಾಡಿದರು.
ಸಹಾಯಕ ವ್ಯವಸ್ಥಾಪಕ ಪಿಎಫ್‌ಆರ್‌ಡಿಎ ನವದೆಹಲಿ ಈಶ್ವರ ದತ್ತ ನಿರ್ಮ ಅಟಲ್ ಅವರು ಪಿಂಚಣಿ ಯೋಜನೆ ಕುರಿತು ಮಾಹಿತಿ ನಿಡಿದರು. ಬೆಳಗಾವಿ ಜಿಲ್ಲಾ ಜಂಟಿ ನಿರ್ದೇಶಕರು ಕೈಗಾರಿಕಾ ಕೇಂದ್ರ ಸತ್ಯನಾರಾಯಣ ಭಟ್, ಗೋಕಾಕ್ ಎಜಿಎಂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ಕಛೇರಿ ಸಂತೋ? ನರಗುಂದ, ಅರುಣ್ ಕುಮಾರ್ ಬೆಳಗಾವಿ, ಝಾ ಎಜಿಎಂ ಬ್ಯಾಂಕ್ ಆಫ್ ಇಂಡಿಯಾ ಶಹಾಪುರ ಶಾಖೆಯ ಅರುಣ್ ಕುಮಾರ್,ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಬೆಂಗಳೂರಿನ ವಿದ್ಯಾ ಎಂ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಆರ್ಥಿಕ ವ?ದ ಮೊದಲ ಅರ್ಧವಾರ್ಷಿಕ ದಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೆವಿಜಿಬಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಗಳನ್ನೂ ಸತ್ಕರಿಸಲಾಯಿತು. ಗೀತಾ ಖಾನಪೇಟ ನಿರೂಪಿಸಿದರು, ಜಿಲ್ಲಾ ಅಗ್ರಣೀಯ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುಲಕರ್ಣಿ ಸ್ವಾಗತಿಸಿದರು, ಮಾರುತಿ ಶ್ರೀನಿವಾಸಲು ಪ್ರಾಸ್ತಾವಿಕ ಭಾ?ಣ ಮಾಡಿದರು ಹಾಗೂ ವ್ಯವಸ್ಥಾಪಕರಾದ ಸಂಜೀವ್ ವಂಜೇರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ