ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕವಾಗಿದ್ದಾರೆ.
ಡಿಸಿಪಿಯಾಗಿದ್ದ ವಿಕ್ರಂ ಅಮಟೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಲಾಗಿದೆ.
ರವೀಂದ್ರ ಗಡಾದಿ 2017ರ ಐಪಿಎಸ್ ಕೇಡರ್ ಆಗಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಮೂಲತಃ ಅಥಣಿಯವರಾದ ಗಡಾದಿ, ಸಧ್ಯಕ್ಕೆ ಹೆಸ್ಕಾಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಈಚಿನ ಬೆಳಗಾವಿ ಗಲಭೆಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದರು. ನಂತರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಡಿಸಿಪಿಯನ್ನೂ ವರ್ಗಾವಣೆ ಮಾಡಲಾಗಿದೆ.
2020ರ ಸೆಪ್ಟಂಬರ್ ನಲ್ಲಿ ಬೆಳಗಾವಿ ಡಿಸಿಪಿಯಾಗಿ ಬಂದಿದ್ದ ವಿಕ್ರಂ ಅಮಟೆ ಬೆಳಗಾವಿಯಲ್ಲಿ ಜನಸ್ನೇಹಿ ಆಡಳಿತ ತರುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಅವರಿಗೆ ಸಧ್ಯಕ್ಕೆ ಯಾವುದೇ ಪೋಸ್ಟ್ ತೋರಿಸಲಾಗಿಲ್ಲ.
ಬೆಳಗಾವಿ ಪೊಲೀಸ್ ಆಯುಕ್ತ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ