Belagavi NewsBelgaum NewsKannada NewsKarnataka NewsNationalPolitics

*ಗ್ರಾಮ‌ ಸಹಾಯಕರಿಂದ ಡಿಸಿಎಂಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಸು.10450 ಗ್ರಾಮ‌ ಸಹಾಯಕರಿಗೆ ಕಳೆದ ಸೆ.25 , 2025 ರಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ನಿರ್ಣಯಿಸಿದ ಗ್ರಾಮ ಸಹಾಯಕರಿಗೆ  “ಡಿ” ಗ್ರೂಪ್ ಅಥವಾ 27000 ಸಾವಿರ ವೇತನ ಹೆಚ್ಚಳ, ಇಡಿಗಂಟು ಇವುಗಳನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಬೆಳಗಾವಿ ಜಿಲ್ಲಾ ಗ್ರಾಮ‌ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ನೇತೃತ್ವದಲ್ಲಿ ಬುಧವಾರ ಸುವರ್ಣ ಸೌಧದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ, ವೇತನ “ಡಿ” ಗ್ರೂಪ್ ಅಥವಾ ವೇತನ 27000 ಹೆಚ್ಚಿಸುವ ಕುರಿತು ಅಧಿಕೃತ ಆದೇಶವಾಗಿಲ್ಲ. ಸಚಿವ ಸಂಪುಟದ ನಿರ್ಣಯದಂತೆ ಅಧಿಕೃತ ಆದೇಶವಾಗಬೇಕು. ಜತೆಗೆ ಸೇವೆಯಿಂದ ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ರೂ.5 ಲಕ್ಷ  ಇಡಿಗಂಟು ಆದೇಶವಾಗಿದ್ದು, ಅಧಿಕೃತ ಸುತ್ತೋಲೆ ಹಣಕಾಸಿನ ಇಲಾಖೆಯಿಂದ ಜಾರಿಯಾಗಿರುವುದಿಲ್ಲ ಕೂಡಲೇ ಸರಕಾರ ಗ್ರಾಮ ಸಹಾಯಕರ 48 ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.

ಮಲ್ಲಿಕಾರ್ಜುನ ನರಗುಂದ, ವೆಂಕಟೇಶ ಕೆಳಗೇರಿ, ಸುನೀಲ ಕೋಲಕಾರ,  ಜಿಲ್ಲಾ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

Home add -Advt

Related Articles

Back to top button