Kannada NewsKarnataka NewsLatest

*ಮತ್ತೊಂದು ಬರ್ಬರ ಹತ್ಯೆ; ಮಹಿಳೆಯನ್ನು ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿ ಎಸೆದ ರೀತಿಯಲ್ಲಿ ಮೃತದೇಹ ಪತ್ತೆ*

Home add -Advt

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂತದ್ದೇ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಲೆಗೈದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕವರ್ ನಲ್ಲಿ ಇಟ್ಟು ಎಸೆದಿರುವ ಘಟನೆ ನಡೆದಿದೆ.

ದೆಹಲಿಯ ಗೀತಾ ಕಾಲೋನಿಯ ಫ್ಲೈ ಓವರ್ ಬಳಿ ಪೊಲೀಸರಿಗೆ ಇಂದು ಪಾಲಿಥಿನ್ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ದೇಹದ ಭಾಗಗಳು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿವೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪರಮಾದಿತ್ಯ, ಎರಡು ಕಪ್ಪು ಪಾಲಿಥಿನ್ ಬ್ಯಾಗ್ ಗಳು ಪತ್ತೆಯಾಗಿದ್ದು, ಒಂದು ಪಾಲಿಥಿನ್ ಬ್ಯಾಗ್ ನಲ್ಲಿ ಮಹಿಳೆಯ ತಲೆ ಇದ್ದು, ಇನ್ನೊಂದು ಬ್ಯಾಗ್ ನಲ್ಲಿ ದೇಹದ ಇತರ ಭಾಗಗಳಿವೆ. ಉದ್ದನೆಯ ಕೂದಲಿನ ಆಧಾರದ ಮೇಲೆ ಅದು ಮಹಿಳೆಯ ಮೃತದೇಹ ಎಂದು ಭಾವಿಸಲಾಗಿದೆ ಇನ್ನೂ ದೃಢಪಟ್ಟಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Related Articles

Back to top button