Belagavi NewsBelgaum NewsKannada NewsKarnataka NewsLatest

*ಚೋರ್ಲಾ ಘಾಟ್ ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಬಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ – ಗೋವಾ ರಸ್ತೆ ಚೋರ್ಲಾ ಘಾಟ್ ನಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.

ಶನಿವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಮಿನಿ ಲಾರ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೈಕ್ ನಂಬರ್ ಕೆಎ 22 ಎಚ್ಎಸ್3074 ಇದ್ದು, ಮಿನಿ ಲಾರಿ ನಂಬರ್ ಕೆಎ22 ಡಿ2273.

ಬೆಳಗ್ಗೆ 8 ಗಂಟೆಗೂ ಮುನ್ನವೇ ಅಪಘಾತ ಸಂಭವಿಸಿದಂತಿದೆ. ಆದರೆ ಸ್ಥಳದಲ್ಲಿ ಪೊಲೀಸರಾಗಲೀ, ಸಂಬಂಧಿಸಿದವರಾಗಲಿ ಕಾಣುತ್ತಿಲ್ಲ ಎಂದು ಆ ಮಾರ್ಗದಲ್ಲಿ 9 ಗಂಟೆ ಹೊತ್ತಿಗೆ ಸಂಚರಿಸುತ್ತಿದ್ದ ವಾಹನ ಸವಾರರೋರ್ವರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

Home add -Advt

Related Articles

Back to top button