Kannada NewsKarnataka NewsLatest

*ಅಂಗಡಿ ಕೆಲಸಗಾರನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಮಾಲೀಕ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಜನರಲ್ ಸ್ಟೋರ್ ಅಂಗಡಿ ಮಾಲೀಕನೊಬ್ಬ ತನ್ನ ಕೆಲಸಗಾರನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ನಡೆದಿದೆ.

ಉತ್ತರ ಭಾರತ ಮೂಲದ ಗಜ್ಜಾನ್ ಜಗು ಕೊಲೆಯಾದ ವ್ಯಕ್ತಿ. ಜನರಲ್ ಸ್ಟೋರ್ ಮಾಲೀಕ ತೌಸಿಫ್ ಹುಸೈನ್ ಗಜ್ಜಾನ್ ಜಗುನನ್ನು ಬೆಂಕಿ ಇಟ್ಟು ಹತ್ಯೆ ಮಾಡಿದ್ದಾನೆ.

Home add -Advt

ಕೃತ್ಯದ ಬಳಿಕ ವಿದ್ಯುತ್ ಶಾಕ್ ನಿಂದ ಕಾರ್ಮಿಕ ಸಾವನ್ನಪ್ಪಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಅನುಮಾನಗೊಂಡ ಪೊಲೀಸರು ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಕೊಲೆ ಸಂಚು ಬಯಲಾಗಿದೆ. ಆರೊಪಿ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button