Kannada NewsKarnataka News
ಸುಸಂಸ್ಕೃತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನಮ್ಮ ಸುದೈವ- ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅತ್ಯಂತ ಸುಸಂಸ್ಕೃತರ, ದೈವ ಭಕ್ತರ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನಮ್ಮ ಸುದೈವ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲಿ ದೇವಸ್ಥಾನಗಳಿವೆ. ಇಲ್ಲದಿರುವಲ್ಲಿ ಹೊಸ ದೇವಸ್ಥಾನ ನಿರ್ಮಾಣಕ್ಕೆ, ಈಗಾಗಲೆ ದೇವಸ್ಥಾನ ಇರುವ ಕಡೆ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯಿಂದ ಮತ್ತು ಸ್ವಂತ ನಿಧಿಯಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಅನುದಾನ ನೀಡಿದ್ದಾರೆ. ಇಡೀ ಕ್ಷೇತ್ರದ ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆ ಜನರಲ್ಲಿದೆ. ಹಾಗಾಗಿಯೇ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದು ನಮಗೆ ಖುಷಿ ತಂದಿದೆ. ಇನ್ನಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಎಲ್ಲರ ಪ್ರೋತ್ಸಾಹ ಸಿಗುತ್ತಿದೆ ಎಂದು ಹಟ್ಟಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದಲಿತ ಸಮಾಜದವರು, ಡಾ. ಬಿ ಆರ್ ಅಂಬೇಡ್ಕರ್ ಸಮಾಜ ಕಮೀಟಿಯವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಯುವಕ ಮಂಡಳದವರು, ನಾಗೇಶ ದೇಸಾಯಿ, ಮಲ್ಲೇಶ ಚೌಗುಲೆ, ಬಸವರಾಜ ತಾನಾಜಿ, ಸಿದ್ದಪ್ಪ ಕಾಂಬಳೆ, ಕಲ್ಲಪ್ಪ ರಾಮಚನ್ನವರ, ಜಿ ಆಯ್ ಬರಗಿ, ಮಲ್ಲಪ್ಪ ಕಾಂಬಳೆ, ರಂಜನಾ ಅಪ್ಪಯಾಚೆ, ಕಲ್ಲವ್ವ ಕರೇಗಾರ್, ನಿತಿನ್ ದೇಸಾಯಿ, ಪ್ರವೀಣ ಮಾನೆ, ಮಾರುತಿ ಹಂಚಿನಮನಿ, ಪ್ರವೀಣ ನಾಗಣ್ಣವರ, ಶಿವರಾಯ ಕೋಲಕಾರ, ಶಶಿಕಾಂತ ಮೇತ್ರಿ, ಮಾರುತಿ ಹಂಚಿನಮನಿ, ಯಲ್ಲೇಶ ಕಾಂಬಳೆ, ಬಾಬು ಕೋಲಕಾರ, ರಾಜು ಕರೇಲಕರ್, ದಶರಥ ನಾಗಣ್ಣವರ, ವಿರುಪಾಕ್ಷಿ ಕೋಲಕಾರ, ಸಚಿನ ನಾಗಣ್ಣವರ, ಉಮೇಶ ಮೇತ್ರಿ, ಸಿದ್ದವೀರ ಕೋಲಕಾರ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ