ಪ್ರಗತಿವಾಹಿನಿ ಸುದ್ದಿ: ದೇಶದ ಹಲವು ರಾಜ್ಯಗಳಲ್ಲಿ ಮೈ ಕೊರೆಯುವ ಚಳಿ ಆರಂಭವಾಗಿದ್ದು, ಅದರಲ್ಲಿಯೂ ಉತ್ತರ ಭರತದ ಹಲವೆಡೆಗಳಲ್ಲಿ ವಿಪರೀತ ಚಳಿಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಮುಂದಿನ ಐದು ದಿನಗಳಲ್ಲಿ ಇನ್ನಷ್ಟು ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತದಲ್ಲಿ ಜೆಟ್ ಸ್ಟ್ರೀಮ್ ವಿಂದ್ ವೇಗ ಸಮುದ್ರ ಮಟ್ಟದಿಂದ 12.6 ಕಿ.ಮೀ ಎತ್ತರದಲ್ಲಿ 130-140 ನಾಟ್ ವೇಗವಾಗಿ ಬೀಸಲಿದ್ದು, ಇದು ಚಳಿ ಗಾಳಿಯನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಶೀತಗಾಳಿ ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ.
ಚಳಿ ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ದಟ್ಟ ಮಂಜು ಆವರಿಸಲಿದ್ದು, ಬಿಹಾರ, ಉತ್ತರ ರಾಜಸ್ಥಾನ, ಹರಿಯಣ, ಪಂಜಾಬ್ ಗಳಲ್ಲಿ ಚಳಿತ ತೀವ್ರತೆ ಹೆಚ್ಚಾಗಲಿದ್ದು ಎಚ್ಚರವಹಿಸುವಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ