Cancer Hospital 2
Beereshwara 36
LaxmiTai 5

ಮದುವೆಗೆ ಹೊರಟ್ಟಿದ ಟ್ರ್ಯಾಕ್ಟರ್ ಪಲ್ಟಿ: 13 ಜನರ ಸಾವು

Anvekar 3
GIT add 2024-1

ಪ್ರಗತಿವಾಹಿ‌ನಿ ಸುದ್ದಿ: ಮದುವೆಗೆ ಹೊರಟ್ಟಿದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾದ ಪರಿಣಾಮ 4 ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದು 15 ಮಂದಿ ಗಾಯಗಳಾಗಿರುವ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.‌

ಈ ದುರಂತವು ಮದ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಪಿಪ್ಲೋಡಿಯಲ್ಲಿ ನಡೆದಿದೆ. ಮೃತರು ರಾಜಸ್ಥಾನದ ಮೋತಿಪುರ ಗ್ರಾಮದಿಂದ ರಾಜ್‌ಗಢ್‌ನ ಕುಲಂಪುರಕ್ಕೆ ಪ್ರಯಾಣಿಸುತ್ತಿದ್ದ ಮದುವೆ ದಿಬ್ಬಣದಲ್ಲಿದ್ದರು. ದುರಂತದಲ್ಲಿ ಗಾಯಗೊಂಡವರಲ್ಲಿ 13 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆ ಹಾಗೂ ಎದೆಗೆ ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

Emergency Service

ಚಾಲಕ ಪಾನಮತ್ತನಾಗಿದ್ದ ಮತ್ತು ಟ್ರಾಲಿ ಓವರ್‌ಲೋಡ್ ಆಗಿದ್ದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮದುವೆ ಮೆರವಣಿಗೆಯಲ್ಲಿ 40 ರಿಂದ 50 ಜನರು ಸೇರಿದ್ದು, ಪಿಪ್ಲೋಡಿ ಗ್ರಾಮದ ಬಳಿ ಟ್ರ್ಯಾಕ್ಟರ್ ಟ್ರಾಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 40 ರಿಂದ 50 ಜನರೊಂದಿಗೆ ಮದುವೆ ಮೆರವಣಿಗೆ ರಾಜಸ್ಥಾನದ ಜಲಾವರ್ ಜಿಲ್ಲೆಯ ಮೋತಿಪುರದಿಂದ ರಾಜ್‌ಗಢದ ಕುಮಾಲ್‌ಪುರಕ್ಕೆ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಬರುತ್ತಿತ್ತು. ಪಿಪ್ಲೋಡಿ ಗ್ರಾಮದ ಬಳಿ ಟ್ರ್ಯಾಕ್ಟರ್ ಟ್ರಾಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್-ಟ್ರಾಲಿ ಪಲ್ಟಿಯಾದ ನಂತರ, ಜನರು ಅದರ ಅಡಿಯಲ್ಲಿ ಸಿಲುಕಿದ್ದರು, ತಡರಾತ್ರಿಯವರೆಗೂ ಜೆಸಿಬಿ ಯಂತ್ರಗಳ ಸಹಾಯದಿಂದ ಹೊರತೆಗೆಯಲಾಗಿದೆ.

Bottom Add3
Bottom Ad 2